ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸಮಾಡಿ ಸಮಾಜಕ್ಕೆ ಕೊಡುಗೆ ನೀಡಲಿ : ಸಂಸದ ಜಿ.ಕುಮಾರ ನಾಯಕ

Update: 2025-01-06 10:09 GMT

ರಾಯಚೂರು : ನಗರದ ಟ್ಯಾಗೋರ್ ಪ್ರೌಢಶಾಲೆಯಲ್ಲಿ ಮಲದಕಲ್ ಗೆಳೆಯರ ಬಳಗ ಹಾಗೂ ಜ್ಞಾನ ವೃಕ್ಷ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ದೇವದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಮೂರನೇ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಜಿ.ಕುಮಾರ ನಾಯಕ, ವಿದ್ಯಾರ್ಥಿಗಳು ಕಠಿಣ ಶ್ರಮವಹಿಸಿ ಅಭ್ಯಾಸ ಮಾಡಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಸಮಾಜ ನಿರ್ಮಾಣ ಮಾಡುವಂತಹ ಅಧಿಕಾರಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಿ, ಕೇವಲ ರಾಜ್ಯ ಸರ್ಕಾರದ ಹುದ್ದೆಗೆ ತಯಾರಿ ನಡೆಸುವುದಲ್ಲದೆ ಕೇಂದ್ರ ಸರಕಾರದ ರೈಲ್ವೆ ,ಬ್ಯಾಂಕಿಂಗ್, UPSC ಅಂತಹ ಪರೀಕ್ಷೆಗಳನ್ನು ಬರೆದು ಯಶಸ್ವಿಯಾಗಿ ಈ ಭಾಗದ ಜನರಿಗೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಇದ್ದು ತಾವೆಲ್ಲರೂ ಶಿಕ್ಷಣವಂತರಾಗಿ ಉನ್ನತ ಹುದ್ದೆಯನ್ನು ಪಡೆದು ಈ ಭಾಗದ ಕಳಂಕವನ್ನು ನಿರ್ಮೂಲನೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಪ,ಪೂ ಗುರುಬಸವ ರಾಜ ಗುರುಗಳು , ರವಿ ಪಾಟೀಲ್, ಶಶಿಕಾಂತ್ ಶಿವಪುರ,ಚನ್ನಬಸವಣ್ಣ, ಇಂದಿರಾ ಸೇರಿದಂತೆ ಅನೇಕ ಉಪನ್ಯಾಸಕರು ಸ್ಪರ್ಧಾರ್ಥಿಗಳು ಹಾಜರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News