ಸಿಂಧನೂರು ನಗರದಲ್ಲಿ ಮುಸ್ಲಿಂ ವೃತ್ತಿನಿರತರ ಸ್ನೇಹಕೂಟ

Update: 2025-01-05 10:52 GMT

ರಾಯಚೂರು : ಸಿಂಧನೂರು ನಗರದ ಮಸ್ಜಿದ್ ಎ ಹುದಾನಲ್ಲಿಂದು ಜಮಾತೆ ಇಸ್ಲಾಂ ಸಿಂಧನೂರು ತಾಲೂಕು ಸಮಿತಿಯಿಂದ ಮುಸ್ಲಿಂ ವೃತ್ತಿ ನಿರತರರ ಸ್ನೇಹಕೂಟ ನಡೆಯಿತು.

ತಾಲೂಕು ಅಧ್ಯಕ್ಷ ಹುಸೈನ್ ಸಾಬ್ ಮಾತನಾಡಿ, ನೈತಿಕತೆ, ಮಾನವೀಯತೆ, ಸಂಘಟನೆ ಹಾಗೂ ಒಗಟ್ಟಿನಿಂದ ಇರಬೇಕು. ನಾವೆಲ್ಲರೂ ಸಹನೆ, ಶಿಸ್ತು, ಸಂಯಮ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜನಾಬ್ ಲಾಲ್ ಹುಸೈನ್ ಸಾಬ್ ಕಂದಗಲ್ ಮಾತನಾಡಿ, ಮುಸ್ಲಿಮರು ಸಂಶೋಧನೆ ಸಾಹಿತ್ಯ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸ್ಕಾಲರ್ ಶಿಪ್, ಬಡ್ಡಿ ರಹಿತ ಬ್ಯಾಂಕ್ ಮೂಲಕ ಸಹಕಾರ ನೀಡಿ ಉತ್ತಮ ಸಮಾಜದ ನಿರ್ಮಿಸಬೇಕಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಆಗಿದೆ ಎಂದು ತಿಳಿಸಿದರು.

ಮಹಮ್ಮದ್ ಅಲಿ ಮೂರ್ತುಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಯದ್ ಹಫೀಜ್ ಉಸಾಮಾ ಸಾಬ್ ಕುರಾನ್ ಪಠಣ ಮಾಡಿದರು. ಮುಖ್ಯಗುರು ಜನಾಬ್ ಹುಸೈನ್ ಬಾಷಾ ಜಮಾತೆ ಇಸ್ಲಾಮಿ ಹಿಂದ್ ನ ವಾರ್ಷಿಕ ವರದಿ ವಾಚನ ಮಾಡಿದರು.

ಕೊಪ್ಪಳ ಜಿಲ್ಲಾ ಸಂಚಾಲಕ ದಿಲಾವರ್ ಅಂಬರ್ ಖಾನ್,ನಗರದ ಸರಕಾರಿ ಅಧಿಕಾರಿಗಳು, ಸಿಬ್ಬಂದಿ, ಉಪನ್ಯಾಸಕರು, ಶಿಕ್ಷಕರು ವಕೀಲರು ಸೇರಿದಂತೆ 150 ಕ್ಕೂ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಮುಹಮ್ಮದ್ ಯಾಕೂಬ್ ಅಲಿ ನಿರೂಪಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News