ರಾಯಚೂರು: ಅಬಕಾರಿ ಅಧಿಕಾರಿಗಳ ದಾಳಿ; 80 ಲೀಟರ್ ಕಲಬೆರಕೆ ಸೇಂದಿ ವಶ
Update: 2025-01-05 05:44 GMT
ರಾಯಚೂರು: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಕಲಬೆರಕೆ ಸೇಂದಿ ಮಾರಾಟ ಮಾಡಲು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಅಬಕಾರಿ ಪೊಲೀಸರು 80 ಲೀ. ಸೇಂದಿ ಜಪ್ತಿ ಮಾಡಿಕೊಂಡಿರುವ ಘಟನೆ ರಾಯಚೂರಿನ ಮೈಲಾರನಗರದಲ್ಲಿ ನಡೆದಿದೆ.
ಬಂಧಿತನನ್ನು ಮೈಲಾರನಗರದ ಮಹೇಶ ಕುಮಾರ ಎಂದು ಗುರುತಿಸಲಾಗಿದ್ದು, ಈತನಿಂದ ಕೃತ್ಯಕ್ಕೆ ಬಳಸಿದ ಹಿರೋಹೊಂಡಾ ಬೈಕ್ ವಶಪಡಿಸಿಕೊಳ್ಳಲಾಗಿದೆ.
ರಾಯಚೂರು ಉಪ ವಿಭಾಗದ ಅಬಕಾರಿ ನಿರೀಕ್ಷಕಿ ಬಿ.ಕವಿತಾ ಹಾಗೂ ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.