ರಾಯಚೂರು | ಶುದ್ಧೀಕರಣ ಘಟಕಕ್ಕೆ ಇಒ ಭೇಟಿ; ಪರಿಶೀಲನೆ

Update: 2025-01-04 14:36 GMT

ರಾಯಚೂರು : ತಾಲೂಕಿನ ಬಿಚ್ಚಾಲಿ ಗ್ರಾಮದ ಹತ್ತಿರವಿರುವ ಅಲ್ಕೂರು ಮತ್ತು ಇತರೆ 17 ಗ್ರಾಮಗಳ ಬಹು ಗ್ರಾಮ ಕುಡಿಯುವ ನೀರಿನ ಶುದ್ದೀಕರಣ ಘಟಕದಲ್ಲಿ ಶುಕ್ರವಾರ ಸತ್ತ ನಾಯಿ ಪತ್ತೆಯಾಗಿ, ವಾಂತಿ ಭೇದಿಯಾಗಬಹುದೆಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆಂದು ವರದಿಯಾದ ಹಿನ್ನೆಲೆಯಲ್ಲಿ ರಾಯಚೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ಮೂಡಲದಿನ್ನಿ ಗ್ರಾಮದ ಹತ್ತಿರ ರೈಲ್ವೆ ಟ್ರಾಕ್ ಕೆಳಗೆ ಹೋಗಿರುವ ಪೈಪ್ ಲೈನ್ ದುರಸ್ತಿ ಹಿನ್ನೆಲೆಯಲ್ಲಿ ಗ್ರಾಮದ ಹತ್ತಿರವಿರುವ ಅಲ್ಕೂರು ಮತ್ತು ಇತರೆ 17 ಗ್ರಾಮಗಳ ಬಹು ಗ್ರಾಮ ಕುಡಿಯುವ ನೀರಿನ ಶುದ್ದೀಕರಣ ಘಟಕಕ್ಕೆ ಸುಮಾರು 20 ದಿನಗಳಿಂದ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಈ ಘಟಕದ ತಳದಲ್ಲಿ ಸುಮಾರು 20 ದಿನಗಳಿಂದ ನೀರು ನಿಂತು ಪಾಚಿಗಟ್ಟಿದ್ದು, ಯಾರೋ ದುಷ್ಕರ್ಮಿಗಳು ಸತ್ತ ನಾಯಿಯನ್ನು ಹಾಕಿ ಇದರಿಂದಾಗಿ ವಾಂತಿ ಭೇದಿ ಆಗುತ್ತಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ ಎಂದರು.

ಮಾಧ್ಯಮಗಳಲ್ಲಿ ಪ್ರಸಾರವಾದಂತೆ ಯಾವುದೇ ವಾಂತಿ, ಭೇದಿ ಪ್ರಕರಣಗಳು ಇರುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಅವರು ಗ್ರಾಮಸ್ಥರಿಗೆ ಸ್ಪಷ್ಟನೆ ನೀಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News