ರಾಯಚೂರು | ಈದ್ಗಾ ಮೈದಾನ ಕಾಮಗಾರಿ ವಿಳಂಬ : ಜಿಲ್ಲಾಧಿಕಾರಿಗೆ ದೂರು
Update: 2025-01-03 14:15 GMT
ರಾಯಚೂರು : ಜಿಲ್ಲೆಯ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡಿಹಾಳ ಗ್ರಾಮದ ಈದ್ಗಾ ಮೈದಾನ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಖರ್ಚು ಮಾಡದೇ ಸಂಶಯಕ್ಕೆ ಈಡಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಜೀಝ್ ಜಾಗೀರ್ದಾರ್ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ 3 ಲಕ್ಷ ರೂ.ಹಣ ಬಿಡುಗಡೆಯಾದರೂ ಈವರೆಗೆ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಮಂಡಳಿಯ ಹಣ ದುರ್ಬಳಕೆ ಆಗಿರುವ ಅನುಮಾನ ವ್ಯಕ್ತವಾಗುತ್ತಿದೆ.
ತಿಂಗಳುಗಳೇ ಕಳೆದರೂ ಕಾಮಗಾರಿ ನಡೆದಿಲ್ಲ. ವಕ್ಫ್ ಅಧಿಕಾರಿಗಳು ಹಾಗೂ ಕಮಿಟಿಯ ಸದಸ್ಯರು ಹಣ ದುರುಪಯೋಗ ಮಾಡಲಾಗಿದೆ ಎಂಬ ಅನುಮಾನವಾಗಿದೆ. ಕೂಡಲೇ ಈದ್ಗಾ ಕಾಮಗಾರಿಯನ್ನು ಪ್ರಾರಂಭ ಮಾಡಿ ವಿಳಂಬ ಧೋರಣೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.