ರಾಯಚೂರು | ಭಿಕ್ಷಾಟನೆಯಲ್ಲಿ ತೊಡಗಿದ್ದ ಇಬ್ಬರು ಬಾಲಕಿಯರ ರಕ್ಷಣೆ

Update: 2025-01-01 12:16 GMT

ರಾಯಚೂರು : ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಮರೇಶ ಅವರು ಮಾರ್ಗದರ್ಶನದಂತೆ ಮಂಗಳವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ ಮತ್ತು ಮಕ್ಕಳ ಸಹಾಯವಾಣಿ ಘಟಕ ರಾಯಚೂರು ಸಹಯೋಗದಲ್ಲಿ ರಾಯಚೂರು ನಗರದ ಗಂಜ್ ಏರಿಯಾದ ವ್ಯಾಪ್ತಿಯಲ್ಲಿ ಭಿಕ್ಷಾಟನೆ, ಚಿಂದಿ ಆಯಿಸುವ ಹಾಗೂ ಬಾಲಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಾಚರಣೆಯನ್ನು ಮಾಡಲಾಯಿತು.

ಕಾರ್ಯಾಚರಣೆಯಲ್ಲಿ ಇಬ್ಬರು ಬಾಲಕಿಯರನ್ನು ರಕ್ಷಿಸಿ ಸರ್ಕಾರಿ ಬಾಲಮಂದಿರಗಳಿಗೆ ದಾಖಲಿಸಲಾಯಿತು.

ಕಾರ್ಯಾಚರಣೆಯಲ್ಲಿ ಮರ್ಕೆಟ್ ಯಾರ್ಡ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಮಿತಾ ರಾಮ್, ಎ.ಎಸ್.ಐ. ಶ್ರೀನಿವಾಸ, ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಮಂಜುನಾಥ ರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕಿರಲಿಂಗಪ್ಪ ಅಶ್ವಿನಿ, ಮುಖ್ಯ ಪೊಲೀಸ್ ಪೇದೆಗಳಾದ ಚಂದ್ರಶೇಖರ, ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿ ಬಸವರಾಜ, ಸಮಾಜ ಕಾರ್ಯಕರ್ತೆ, ದಿನೇಶ ಕುಮಾರ್, ಕು.ಈರಮ್ಮ, ಮಕ್ಕಳ ಸಹಾಯವಾಣಿ ಸಿಬ್ಬಂದಿ ದೇವಮ್ಮ, ಮೇಲ್ವಿಚಾರಕರಾದ ಮಹೇಶ ಮತ್ತು ತಾಯರಾಜ್ ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News