ರಾಯಚೂರು | ಬೌದ್ಧರ ಪವಿತ್ರ ಸ್ಥಳ ಬುದ್ಧಗಯಾ ಬೌದ್ಧರಿಗೆ ನೀಡಲು ಒತ್ತಾಯ
ರಾಯಚೂರು : ರಾಜಕುಮಾರ ಸಿದ್ಧಾರ್ಥ ಬೋಧಿ ಜ್ಞಾನ ಪಡೆದು ಭಗವಾನ್ ಬುದ್ಧನಾದ ಸ್ಥಳ ಬುದ್ಧಗಯಾದ ಮಹಾಬೋಧಿ ಮಹಾ ವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿ ಛಲವಾದಿ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಗುಜರಾತಿನ ಬುದ್ದಗಯಾ ದೇವಾಲಯವನ್ನು ಬೌದ್ದರಿಗೆ ನೀಡಲು ಬಿ.ಟಿ. ಕಾಯ್ದೆ 1949 ರದ್ದುಪಡಿಸಿ ಬುದ್ದಗಯಾವನ್ನು ಸಂಪೂರ್ಣವಾಗಿ ಬೌದ್ದರಿಗೆ ನೀಡಬೇಕು. ಸಂವಿಧಾನವು ಎಲ್ಲಾ ಧರ್ಮದವರಿಗೆ ತಮ್ಮ ತಮ್ಮ ಧಾರ್ಮಿಕ ಕೇಂದ್ರಗಳ ಆಡಳಿತವನ್ನು ನಿರ್ವಹಿಸುವ ಅವಕಾಶ ನೀಡಿದೆ. ಗುರುದ್ವಾರವನ್ನು ಸಿಖ್ಳರಿಗೆ, ದರ್ಗಾಗಳನ್ನು ಮುಸ್ಲಿಮರಿಗೆ ಹಾಗೂ ಓರಿಸ್ಸಾದ ಜಗನ್ನಾಥ ಮಂದಿರ, ಕೇರಳದ ಗುರುವಾಯುರ್ ದೇವಸ್ಥಾನ, ಮಧ್ಯಪ್ರದೇಶದ ಮಹಾಕಾಳೇಶ್ವರ, ಉತ್ತರ ಪ್ರದೇಶದ ಕಾಶಿ, ಶ್ರೀಶೈಲ, ತಿರುಪತಿ, ಕಾಶ್ಮೀರ ವೈಷ್ಣವಿದೇವಿ ದೇವಾಲಯಗಳನ್ನು ಹಿಂದೂಗಳಿಗೆ ಪೂಜೆ ಹಾಗೂ ಆಡಳಿತ ಮಂಡಳಿ ನಿರ್ವಹಣೆ ಮಾಡಲು ಅಧಿಕಾರ ನೀಡಲಾಗಿದೆ. ಆದರೆ ಬೌದ್ದರು ಆರಾಧಿಸುವ ಬುದ್ದಗಯಾ ಮಾತ್ರ ಬೌದ್ದಧರ್ಮಿಯರಿಗೆ ನೀಡುತ್ತಿಲ್ಲ. ಇದು ಇದುವರೆಗೆ ಬೇರೆ ಸಮುದಾಯದವರ ನಿಯಂತ್ರಣದಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬುದ್ದಗಯಾ ಬೌದ್ದ ಧರ್ಮಿಯರಿಗೆ ನಿಡಲು ಬಿ.ಟಿ.ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೊಳಿಸಬೇಕು. ಸಂವಿಧಾನ ದಿನಾಚರಣೆಯನ್ನು ಆಚರಿಸುತ್ತಿರುವಾಗ ಸಂವಿಧಾನ ಬದ್ದವಾದ ಧಾರ್ಮಿಕ ಅವಕಾಶಗಳಿಂದ ಬೌದ್ದರನ್ನು ವಂಚಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ರವೀಂದ್ರ ನಾಥ ಪಟ್ಟಿ, ಮಹಾಸಭಾ ಅಧ್ಯಕ್ಷ ಶಿವರಾಜ ಜಾನೇಕಲ್, ಬಸವರಾಜ, ವಿಶ್ವನಾಥ ಪಟ್ಟಿ, ಮಹೇಶ, ನರಸಿಂಹಲು, ರವಿ ರಾಂಪುರು, ಮಾರೆಪ್ಪ ಭಾಗವಹಿಸಿದ್ದರು.