ರಾಯಚೂರು | ವಿದ್ಯಾರ್ಥಿಗಳು ಇತಿಹಾಸ ಅರಿಯಬೇಕು : ಶ್ರೀನಿವಾಸ ಗಟ್ಟು
ರಾಯಚೂರು : ಜಿಲ್ಲೆಯು ಕೋಟೆ ಕೊತ್ತಲೆಗಳು ಚರಿತ್ರೆಯಲ್ಲಿ ಹೆಸರುವಾಸಿಯಾಗಿವೆ. ಇಲ್ಲಿನ ಇತಿಹಾಸವನ್ನು ಅನಾವರಣ ಆಗುವ ಕೆಲಸವಾಗಬೇಕಿದ್ದು ಮುಖ್ಯವಾಗಿ ವಿದ್ಯಾರ್ಥಿಗಳು ಇತಿಹಾಸ ಅರಿಯಬೇಕು ಎಂದು ಶ್ರೀನಿವಾಸ ಗಟ್ಟು ಹೇಳಿದ್ದಾರೆ.
ಜಿಲ್ಲಾ ಪದವಿಪೂರ್ವ ಕಾಲೇಜುಗಳ ಇತಿಹಾಸ ಉಪನ್ಯಾಸಕರ ಸಂಘ ರಾಯಚೂರು ಮತ್ತು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ರಾಯಚೂರು ಇವರ ಸಹಯೋಗದಲ್ಲಿ ರಾಯಚೂರು ಕೋಟೆಯ 730ನೇ ವರ್ಷದ ದಿನಾಚರಣೆ ಅಂಗವಾಗಿ ಹಿರಿಯ ಸಾಹಿತಿ ವೀರಹನುಮಾನ ಅವರ ʼನಮ್ಮ ಎಡೆದೊರೆ ನಾಡುʼ ಎಂಬ ಪುಸ್ತಕ ಪರಿಚಯದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ನಮ್ಮ ಎಡೆದೊರೆ ನಾಡು ಪುಸ್ತಕ ಉಪಯೋಗ ಆಗುತ್ತದೆ. ಕೃತಿ ಚಿಕ್ಕದಾಗಿ ಜಿಲ್ಲೆಯ ಇತಿಹಾಸ ತೆರೆದಿಡುತ್ತದೆ. ವರ್ತಮಾನದಲ್ಲಿ ನಿಂತು ಇತಿಹಾಸದ ಬಗ್ಗೆ ಆಲೋಚನೆ ಮಾಡಬೇಕು ಹಿಂದಿನ ವೈಭವವನ್ನು ಈ ಕೃತಿ ಸ್ಮರಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಗೋಪಾಲ ಜೂಕೂರು ವಹಿಸಿದ್ದರು. ಕೃತಿಯನ್ನು ನರಸಪ್ಪ ಭಂಡಾರಿ ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಲೇಖಕ ವೀರಹನುಮಾನ, ಪ್ರಕಾಶಕ ಮಲ್ಕಪ್ಪ ಪಾಟೀಲ್, ಎಚ್.ಎಚ್.ಮ್ಯಾದಾರ್, ಆಂಜನೇಯ ಜಾಲಿಬೆಂಚಿ, ರಸೂಲ್ ಸಾಬ್, ವಿ.ಎನ್.ಅಕ್ಕಿ, ಬಸವರಾಜ ಗಾಣಧಾಳ, ಮಹಾದೇವ ಪಾಟೀಲ್, ಅಯ್ಯಪ್ಪಯ್ಯ ಹುಡಾ, ಗೌಸ್ ಪೀರಜಾದೆ, ಬಶೀರ್ ಅಹ್ಮದ್ ಹೊಸಮನಿ, ನವಲಕಲ್ ಶ್ರೀನಿವಾಸ, ಅಮರೇಶ ಆದೋನಿ,ಸೈಯದ್ ಹಫಿಜುಲ್ಲಾ, ಈರಣ್ಣ ಬೆಂಗಾಲಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.