ರಾಯಚೂರು | ಒನಕೆ ಓಬವ್ವನ ಧೈರ್ಯ, ಸಾಹಸ ವಿದ್ಯಾರ್ಥಿನಿಯರಿಗೆ ಸ್ಪೂರ್ತಿಯಾಗಬೇಕು : ಡಿಸಿ ನಿತೀಶ್ ಕೆ.
ರಾಯಚೂರು : ವೀರರಾಣಿ ಒನಕೆ ಓಬವ್ವ ತಾಯಿನೆಲದ ಪ್ರೀತಿಗಾಗಿ ಹಾಗೂ ನಾಡಿನ ಭಕ್ತಿಗಾಗಿ ಹೈದರ್ ಅಲಿಯಾ ಸೈನ್ಯದ ವಿರುದ್ಧ ಹೋರಾಟ ಮಾಡಿದರು. ಅವರ ಧೈರ್ಯ ಮತ್ತು ಸಾಹಸಗಳನ್ನು ವಿದ್ಯಾರ್ಥಿನಿಯರು ಸ್ಪೂರ್ತಿಯಾಗಿ ಪಡೆಯಬೇಕೆಂದು ಜಿಲ್ಲಾಧಿಕಾರಿ ನಿತೀಶ್ ಕೆ. ಹೇಳಿದ್ದಾರೆ.
ಸೋಮವಾರ ನಗರದ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಬ್ಬ ವ್ಯಕ್ತಿ ಮಹಾನ್ ವ್ಯಕ್ತಿ ಆಗುವುದು ಒಂದು ಸಮುದಾಯ ಅಥವಾ ಜಾತಿ, ಬಾಷೆಯಿಂದಲ್ಲ ಅವರ ಸಾಧನೆಯಿಂದ ಮಹಾನ್ ವ್ಯಕ್ತಿಯಾಗುತ್ತಾರೆ. ಶ್ರೇಷ್ಠ ವ್ಯಕ್ತಿಗಳನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಬಾರದು. ವೀರರಾಣಿ ಒನಕೆ ಓಬವ್ವನ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವ ಸಲುವಾಗಿ ಜಿಲ್ಲೆಯಿಂದ ಚಿತ್ರದುರ್ಗದ ಓಬವ್ವನ ಕಿಂಡಿಯನ್ನು ಶಾಲಾ ಮಕ್ಕಳಿಗೆ ತೋರಿಸಲು ಒಂದು ದಿನದ ಪ್ರವಾಸ ಕೂಡ ಆಯೋಜಿಸಲಾಗುವುದು ಎಂದು ಹೇಳಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಮಹಾದೇದೇವಿ ಅಮರೇಶ ಗೋಪಾಲಪುರ್ ಅವರು ಮಾತನಾಡಿ, ಹೆಣ್ಣಿಗೆ ಅಲೆಗಳನ್ನು ತರಿಸುವ ಶಕ್ತಿ ಇರುತ್ತದೆ. ಅದಕ್ಕೆ ಉದಾಹರಣೆ ವೀರರಾಣಿ ಒನಕೆ ಓಬವ್ವ 18ನೇ ಶತಮಾನದ ಚಿತ್ರದುರ್ಗ ಇತಿಹಾಸದಲ್ಲಿ ಒನಕೆ ಓಬವ್ವ ಚರಿತ್ರೆಯನ್ನು ಸರಕಾರ ಜಯಂತಿಯಾಗಿ ಆಚರಿಸುವುದು ಖುಷಿಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಶಶಿಕಾಂತ್ ಶಿವಪೂರೆ, ಹೆಚ್ಚುವರಿ ಪೊಲೀಸ್ ಅಧಿಕಾರಿಗಳಾದ ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಸುರೇಂದ್ರಬಾಬು, ನಗರಸಭೆಯ ಅಧ್ಯಕ್ಷರಾದ ನರಸಮ್ಮ, ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಮಲ್ಲೇಶ್ ಕೊಲಮಿ, ಅಂಬೇಡ್ಕರ್ ಸೇನೆಯ ಅಧ್ಯಕ್ಷರಾದ ವಿಶ್ವನಾಥ್ ಪಟ್ಟಿ, ಆಟ್ರಾಸಿಟಿ ಕೇಸ್ ಮೇಲ್ವಿಚಾರಕರಾದ ಕೆ.ವಿ ಕುಮಾರ್, ಛಲವಾದಿ ಮಹಾಸಭಾದ ಅಧ್ಯಕ್ಷರಾದ ವಸಂತ.ಎಂ ಸೇರಿದಂತೆ ಇತರರು ಉಪಸ್ಥಿತರಿದ್ದರು.