ರಿಪ್ಪನ್‌ಪೇಟೆ | ಹಿರಿಯ ವೈದ್ಯ ಹಮೀದ್ ನಿಧನ
Update: 2024-06-24 09:06 GMT
ಶಿವಮೊಗ್ಗ: ಹೆಸರಾಂತ ಮಕ್ಕಳ ತಜ್ಞ, ರಿಪ್ಪನ್ ಪೇಟೆ ಪಟ್ಟಣದ ಹೆಸರಾಂತ ಮದನಿ ಕ್ಲಿನಿಕ್‌ನ ಹಿರಿಯ ವೈದ್ಯ ಹಮೀದ್ ಡಾಕ್ಟರ್(90) ಸೋಮವಾರ ನಿಧನರಾಗಿದ್ದಾರೆ.
ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಜನರಿಗೆ ಬಹು ಪರಿಚಿತರಾಗಿದ್ದ ಹಮೀದ್ ಡಾಕ್ಟರ್ ಸೋಮವಾರ ಬೆಳಿಗ್ಗೆ ಪಟ್ಟಣದ ವಿನಾಯಕ ವೃತ್ತದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಸುಮಾರು 6 ದಶಕಗಳ ಕಾಲ ಮದನಿ ಕ್ಲಿನಿಕ್ ಮುಖಾಂತರ ಜನರ ಸೇವೆ ಮಾಡಿದ್ದ ಡಾಕ್ಟರ್ ಹಮೀದ್ ಅವರು ಕಾಮಾಲೆ , ದಮ್ಮು ಖಾಯಿಲೆಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದರು. ರಾಜ್ಯದ ಮೂಲೆ ಮೂಲೆಗಳಿಂದ ರೋಗಿಗಳು ಪಟ್ಟಣದ ಮದನಿ ಕ್ಲಿನಿಕ್ ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಮೃತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.