ನಕ್ಸಲ್ ಹೋರಾಟಗಾರ್ತಿ ಶ್ರೀಮತಿಯನ್ನು ವಶಕ್ಕೆ ಪಡೆದ ತೀರ್ಥಹಳ್ಳಿ ಪೊಲೀಸರು

Update: 2024-03-04 07:03 GMT

ಶಿವಮೊಗ್ಗ: ನಕ್ಸಲ್ ಹೋರಾಟದ ಕೇಸ್ ಗಳ ತನಿಖೆಯನ್ನು ಚುರುಕುಗೊಳಿಸಿರುವ ಜಿಲ್ಲೆಯ ತೀರ್ಥಹಳ್ಳಿ ಪೊಲೀಸರು ಇದೀಗ ಮತ್ತೋರ್ವ ನಕ್ಸಲ್ ಹೋರಾಟಗಾರ್ತಿಯನ್ನು ವಶಕ್ಕೆ ಪಡೆದುಕೊಂಡಿರುವುದು ವರದಿಯಾಗಿದೆ.

ವಶಕ್ಕೆ ಪಡೆದಿರುವ ನಕ್ಸಲ್ ಹೋರಾಟಗಾರ್ತಿ ಶೃಂಗೇರಿಯ ಶ್ರೀಮತಿಯನ್ನು ಪೊಲೀಸರು ಮಾ.04 ರಂದು ಬೆಳಿಗ್ಗೆ 10.30ಕ್ಕೆ ತೀರ್ಥಹಳ್ಳಿ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ʼಬಾಡಿ ವಾರೆಂಟ್ʼ ಮೇಲೆ ತೀರ್ಥಹಳ್ಳಿಗೆ ಕರೆತಂದಿರುವ ಪೊಲೀಸರು ಆಗುಂಬೆ ಪೊಲೀಸ್ ಠಾಣೆ ಕೇಸ್ ಸಂಬಂಧ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ ಎಂದು ಹೇಳಲಾಗಿದೆ.

ಶ್ರೀಮತಿಯನ್ನು ಪೊಲೀಸರು ಹೆಚ್ಚಿನ ಭದ್ರತೆಯಲ್ಲಿ ಕೇರಳದಿಂದ ಶಿವಮೊಗ್ಗ ಜೈಲಿಗೆ ಕರೆ ತಂದಿದ್ದಾರೆ. ನಕ್ಸಲ್ ಹೋರಾಟದಲ್ಲಿ ಬಿ.ಜಿ. ಕೃಷ್ಣಮೂರ್ತಿ ಜೊತೆ ಶೃಂಗೇರಿಯ ಶ್ರೀಮತಿ ಗುರುತಿಸಿಕೊಂಡಿದ್ದರು. 2023 ನವೆಂಬರ್ 7 ರಂದು ಶ್ರೀಮತಿಯನ್ನು ಕೇರಳ ಪೊಲೀಸರು ಬಂಧಿಸಿದ್ದರು. ಶ್ರೀಮತಿಯವರನ್ನು ವಿಚಾರಣೆ ಬಳಿಕ ತ್ರಿಶೂರ್ ಜೈಲಿನಲ್ಲಿ ಇರಿಸಿದ್ದರು ಎಂದು ಎನ್ನಲಾಗಿದೆ.

ನಕ್ಸಲ್ ನಾಯಕ ಬಿ.ಜಿ‌. ಕೃಷ್ಣಮೂರ್ತಿರನ್ನು ಕಳೆದ ತಿಂಗಳು ಕೋರ್ಟ್‌ ಗೆ ಹಾಜರುಪಡಿಸಿದ್ದ ತೀರ್ಥಹಳ್ಳಿ ಪೊಲೀಸರು ಇದೀಗ ಮತ್ತೋರ್ವ ನಕ್ಸಲ್ ಹೋರಾಟಗಾರ್ತಿ ಶ್ರೀಮತಿಯನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News