ಕೊಡಗು: ಯಥಾಸ್ಥಿತಿಯಲ್ಲಿ ಉಳಿದ 50 ತಾಪಂ ಕ್ಷೇತ್ರಗಳು

Update: 2024-06-23 13:37 GMT

ಮಡಿಕೇರಿ: ಕೊಡಗು ಜಿಲ್ಲೆಯ ಐದು ತಾಲೂಕು ಸೇರಿ ಒಟ್ಟು 50 ತಾಲೂಕು ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡಣೆ ಪಟ್ಟಿಯನ್ನು ಸೀಮಾಗಡಿ ನಿರ್ಣಯ ಆಯೋಗ ಪ್ರಕಟಿಸಿದ್ದು, ಜುಲೈ 3ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಜಿಲ್ಲೆಯಲ್ಲಿ 2016ರ ತಾಲೂಕು ಪಂಚಾಯತ್ ಚುನಾವಣೆಯಲ್ಲಿ 50 ತಾಪಂ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈ ಬಾರಿ ಕೂಡ ಯಾವುದೇ ತಾಪಂ ಕ್ಷೇತ್ರಗಳನ್ನು ಹೆಚ್ಚಳ ಮತ್ತು ಕಡಿಮೆ ಮಾಡದೆ, 50 ತಾಪಂ ಕ್ಷೇತ್ರಗಳನ್ನು ಉಳಿಸಲಾಗಿದೆ.

ಆದರೆ, ಕೆಲವೊಂದು ತಾಪಂ ಕ್ಷೇತ್ರಗಳನ್ನು ನೂತನವಾಗಿ ರಚನೆ ಮಾಡಲಾಗಿದ್ದು, ಕಳೆದ ಬಾರಿಯ ತಾಪಂ ಕ್ಷೇತ್ರಗಳನ್ನು ಅದಲು-ಬದಲು ಮಾಡಲಾಗಿದೆ.

ಮಡಿಕೇರಿ 12, ಸೋಮವಾರಪೇಟೆ 9, ಕುಶಾಲನಗರ 9, ವೀರಾಜಪೇಟೆ 9 ಹಾಗೂ ಪೊನ್ನಂಪೇಟೆ 11 ತಾಪಂ ಕ್ಷೇತ್ರಗಳಿವೆ.


 



2016ರ ತಾಪಂ ಚುನಾವಣೆಯಲ್ಲಿ ಕೊಡಗಿನಲ್ಲಿ ಒಟ್ಟು 50 ಸ್ಥಾನಗಳ ಪೈಕಿ 36 ಸ್ಥಾನಗಳಲ್ಲಿ ಬಿಜೆಪಿ, ಕಾಂಗ್ರೆಸ್ 11 ಹಾಗೂ ಜೆಡಿಎಸ್ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿಕೊಂಡಿತ್ತು.

ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಒಟ್ಟು 29 ಸ್ಥಾನಗಳಲ್ಲಿ ಬಿಜೆಪಿ 18, ಕಾಂಗ್ರೆಸ್ 10 ಹಾಗೂ ಜೆಡಿಎಸ್ 1 ಸ್ಥಾನವನ್ನು ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!