ದೇಶದ ಜನರನ್ನು ಮೋದಿಯ ಸಾಧನೆಯ ಹೆಸರಲ್ಲಿ ಹೇಗೆ ಮೂರ್ಖರನ್ನಾಗಿಸಲಾಯಿತೆಂದರೆ...

Update: 2024-05-14 07:37 GMT
Editor : Ismail | Byline : ವಿನಯ್ ಕೆ.

ಮೋದಿ ವ್ಯಕ್ತಿತ್ವದ ಚಿತ್ರವನ್ನು ಅದ್ಭುತ ಸಾಧನೆ ಎಂದು ಜನರ ಮನಸ್ಸಿನಲ್ಲಿ ಮೂಡುವಂತೆ ಬೆಳೆಸಲಾಯಿತು. ಅಷ್ಟಾದರೂ ಅದರಲ್ಲಿ ಅನೇಕ ಅಸಂಬದ್ಧಗಳು ಉಳಿದಿದ್ದವು. ಅನುಮಾನಗಳು ಎದ್ದವು. ಅವುಗಳ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು.

ಮೋದಿಯ ಬಗ್ಗೆ ಹೀಗೆ ಕಟ್ಟಲಾದ ಕಥೆಗಳನ್ನು ಹೇಗೆ ಕಾರ್ಯತಂತ್ರವಾಗಿ ಬಳಸಿಕೊಳ್ಳಲಾಗಿದೆ ಎಂಬುದನ್ನು ಧ್ರುವ ರಾಠಿ ಇಲ್ಲಿ ಹೇಳಿದ್ದಾರೆ.

ಜನರ ಮುಂದೆ ಇರುವ ಮೋದಿಯ ಚಿತ್ರಕ್ಕೂ ಅದರ ಹಿಂದಿನ ಸತ್ಯಗಳಿಗೂ ಏನು ಅಂತರ ಆ ಹುಡುಕಾಟವೇ ಧ್ರುವ ರಾಠಿಯವರ ವೀಡಿಯೊ, ಮೋದಿಯ ನಿಜ ಕಥೆ. ದೇಶದ ಜನರನ್ನು ಹೇಗೆ ಮೋದಿಯ ಸಾಧನೆಯ ಹೆಸರಲ್ಲಿ ಮೂರ್ಖರನ್ನಾಗಿಸಲಾಯಿತು ಎಂಬುದನ್ನು ವೀಡಿಯೊ ನಿರೂಪಿಸುತ್ತದೆ.

ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿಯಂತೆಯೇ ಬಿಡದೇ ಕಾಡುತ್ತಿರುವ ಇನ್ನೊಬ್ಬ ಧ್ರುವ ರಾಠಿ ಎಂಬುದು ಈಗ ಖಚಿತವಾಗಿದೆ.

ಈಗ ಮೋದಿಯ ರಿಯಲ್ ಸ್ಟೋರಿ ಏನು ಎಂಬುದರ ವೀಡಿಯೊ ಧ್ರುವ ರಾಠಿ ಮಾಡಿದ್ದಾರೆ. ಒಂದೇ ಗಂಟೆಯೊಳಗೆ ಹತ್ತು ಲಕ್ಷ ಜನ ಆ ವೀಡಿಯೊ ವೀಕ್ಷಿಸಿದ್ದಾರೆ ಅಂದರೆ ನೀವೇ ಊಹಿಸಿ.

ಈ ಹೊಸ ವೀಡಿಯೊದಲ್ಲಿ ಮೋದಿ ಸುತ್ತ ಕಳೆದೊಂದು ದಶಕದಲ್ಲಿ ಹೆಣೆಯಲಾದ ರಾಜಕೀಯ ನಿರೂಪಣೆಯನ್ನು ಒಂದೊಂದಾಗಿ ಬಿಚ್ಚಿಡಲಾಗಿದೆ.

ಈ ದೇಶದ ಬಹುಪಾಲು ಮೋದಿ ಅಭಿಮಾನಿಗಳಿಗೆ ಅವರೊಬ್ಬ ಬಾಲ್ಯದಲ್ಲಿ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಾ ತನ್ನ ಬದುಕಿನ ಪ್ರಯಾಣ ಶುರು ಮಾಡಿ ತನ್ನ ಸ್ವಂತ ಶ್ರಮದಿಂದ ದೊಡ್ಡ ನಾಯಕನಾಗಿ ಬೆಳೆದ ಅಸಾಮಾನ್ಯ ವ್ಯಕ್ತಿ. ಆನಂತರ ವಾಟ್ಸ್ ಆ್ಯಪ್ ಯೂನಿವರ್ಸಿಟಿಯವರು ಅದೇ ಪ್ರಚಾರವನ್ನು ಇನ್ನಷ್ಟು ಅತಿರಂಜಿತಗೊಳಿಸಿ ಹಬ್ಬಿಸಿದರೆಂಬುದು ಎಲ್ಲರಿಗೂ ಗೊತ್ತೇ ಇದೆ. ಕ್ರಮೇಣ ಅದೆಲ್ಲವೂ ಯಾವ ಮಟ್ಟಕ್ಕೆ ಮುಟ್ಟಿತೆಂದರೆ, ಸತ್ಯ ಯಾವುದು, ಪ್ರಚಾರಕ್ಕಾಗಿ ಹೇಳಲಾದ ಕಟ್ಟುಕಥೆ ಏನು ಎಂಬುದರ ನಡುವಿನ ಗೆರೆಯೇ ಅಳಿಸಿಹೋಯಿತು.

ಮೋದಿ ವ್ಯಕ್ತಿತ್ವದ ಚಿತ್ರವನ್ನು ಅದ್ಭುತ ಸಾಧನೆ ಎಂದು ಜನರ ಮನಸ್ಸಿನಲ್ಲಿ ಮೂಡುವಂತೆ ಬೆಳೆಸಲಾಯಿತು. ಅಷ್ಟಾದರೂ ಅದರಲ್ಲಿ ಅನೇಕ ಅಸಂಬದ್ಧಗಳು ಉಳಿದಿದ್ದವು. ಅನುಮಾನಗಳು ಎದ್ದವು. ಅವುಗಳ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು.

ಮೋದಿಯ ಬಗ್ಗೆ ಹೀಗೆ ಕಟ್ಟಲಾದ ಕಥೆಗಳನ್ನು ಹೇಗೆ ಕಾರ್ಯತಂತ್ರವಾಗಿ ಬಳಸಿಕೊಳ್ಳಲಾಗಿದೆ ಎಂಬುದನ್ನು ಧ್ರುವ ರಾಠಿ ಇಲ್ಲಿ ಹೇಳಿದ್ದಾರೆ.

ಜನರ ಮುಂದೆ ಇರುವ ಮೋದಿಯ ಚಿತ್ರಕ್ಕೂ ಅದರ ಹಿಂದಿನ ಸತ್ಯಗಳಿಗೂ ಏನು ಅಂತರ ಆ ಹುಡುಕಾಟವೇ ಧ್ರುವ ರಾಠಿಯವರ ವೀಡಿಯೊ, ಮೋದಿಯ ನಿಜ ಕಥೆ. ದೇಶದ ಜನರನ್ನು ಹೇಗೆ ಮೋದಿಯ ಸಾಧನೆಯ ಹೆಸರಲ್ಲಿ ಮೂರ್ಖರನ್ನಾಗಿಸಲಾಯಿತು ಎಂಬುದನ್ನು ವೀಡಿಯೊ ನಿರೂಪಿಸುತ್ತದೆ.

ವೀಡಿಯೊದಲ್ಲಿ, ಕಾನ್ಪುರದ ಬಿಜೆಪಿ ಕಾರ್ಯಕರ್ತ, ವಾಹನಗಳಿಗೆ ಸರಕು ತುಂಬುವ ಕೆಲಸ ಮಾಡಿಕೊಂಡಿರುವ ಮಂಗಲ್ ವಾಜಪೇಯಿ ಎಂಬಾತ, ಬಿಜೆಪಿ ಈ ಬಾರಿ 400ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ ಎಂದು ಹೇಳಿರುವುದನ್ನು ಪ್ರಸ್ತಾಪಿಸಲಾಗಿದೆ.

ತಮಾಷೆಯೆಂದರೆ, ಅತ ಮಾತಾಡುತ್ತ ಮಾತಾಡುತ್ತ ತನ್ನ ಬದುಕಿನಲ್ಲಿನ ತಾಪತ್ರಯಗಳ ಬಗ್ಗೆಯೂ ಹೇಳಿದ್ದಾನೆ.

ವಿದ್ಯುತ್ ಸೌಲಭ್ಯ, ಶೌಚಾಲಯವಿಲ್ಲದ, ಒಳಚರಂಡಿ ವ್ಯವಸ್ಥೆಯಿಲ್ಲದ ಸ್ಥಿತಿಯಲ್ಲಿ ಬದುಕಬೇಕಿರುವ ಸ್ಥಿತಿ, ತಮ್ಮದೇ ಬಿಜೆಪಿ ಎಂಎಲ್‌ಎಗೆ ಹೇಳಿಕೊಂಡರೂ ಪ್ರಯೋಜನವಾಗಿಲ್ಲ ಎಂದಿದ್ದಾನೆ. ಆ ಬಿಜೆಪಿಯ ಕಟ್ಟಾ ಕಾರ್ಯಕರ್ತನಿಗೆ ಬಿಜೆಪಿಯಿಂದ ಸಿಕ್ಕಿದ್ದು ಏನೂ ಇಲ್ಲ.

ಹಸಿವಾದರೆ ಮರಳು, ಮಣ್ಣು ತಿನ್ನುವುದಾಗಿಯೂ ಹೇಳುವ ಆತ, ಅಷ್ಟಾದರೂ, ಬಿಜೆಪಿಯ ಭಕ್ತ. ಮೋದಿಯನ್ನು ದೇವರೆಂದು ಆರಾಧಿಸುತ್ತಾನೆ. ಒಬ್ಬ ರಾಜಕಾರಣಿಯ ಬಗ್ಗೆ ಜನರೇಕೆ ಇಷ್ಟೊಂದು ಅಂಧರಾಗುವುದು ಸಾಧ್ಯವಾಗುತ್ತದೆ ಎಂಬ ಪ್ರಶ್ನೆಯನ್ನು ಧ್ರುವ್ ರಾಠಿ ಎತ್ತುತ್ತಾರೆ.

ಎಂಥೆಂಥ ಭಕ್ತರಿದ್ದಾರೆ ಎಂದರೆ, ಬಿಜೆಪಿ ಟಿಕೆಟ್‌ನಲ್ಲಿ ನಾಯಿ ನಿಂತರೂ ಗೆಲ್ಲುತ್ತದೆ ಎನ್ನುವವರಿದ್ದಾರೆ. ಅಷ್ಟರ ಮಟ್ಟಿಗೆ ಅವರ ಬ್ರೈನ್‌ವಾಷ್ ಮಾಡಲಾಗಿದೆ.

ಬ್ರೈನ್ ವಾಷಿಂಗ್ ಮಾಡುವವರು ನಾಲ್ಕು ಹಂತಗಳಲ್ಲಿರುತ್ತಾರೆ ಎಂದು ವೀಡಿಯೊ ವಿವರಿಸುತ್ತದೆ.

ಮೊದಲು ಜನರ ತಲೆಯೊಳಗೆ ಹಿಂದೂ ಧರ್ಮದ ಇತಿಹಾಸ ಹೇಗೆ ಭವ್ಯವಾಗಿತ್ತು ಎಂದು ತುಂಬಲಾಗುತ್ತದೆ.

ಎರಡನೆಯದು, ಸಾವಿರಾರು ವರ್ಷಗಳಿಂದ ನಿಮ್ಮ ಪೂರ್ವಜರು ಬಲಿಪಶುಗಳಾಗಿ ಬದುಕಿದ್ದಾರೆ ಬಗ್ಗೆ ಹೇಳಲಾಗುತ್ತದೆ.

ಮೂರನೆಯದಾಗಿ, ನೀವು ಭಾರೀ ದೊಡ್ಡ ಅಪಾಯದಲ್ಲಿದ್ದೀರಿ ಎಂದು ಜನರಲ್ಲಿ ಭಯ ತುಂಬಲಾಗುತ್ತದೆ.

ನಾಲ್ಕನೆಯದಾಗಿ, ಇದೆಲ್ಲದರಿಂದ ಪಾರು ಮಾಡಬಲ್ಲವರು ಮೋದಿಯೊಬ್ಬರೇ ಎಂದು ಬಿಂಬಿಸಲಾಗುತ್ತದೆ.

ಮೋದಿ 6 ವರ್ಷದ ಬಾಲಕನಾಗಿದ್ದಾಗ ಗುಜರಾತ್‌ನ ವಡ್ನಗರ್ ರೈಲ್ವೆ ಸ್ಟೇಷನ್‌ನಲ್ಲಿ ಚಹಾ ಮಾರುತ್ತಿದ್ದರು ಎಂಬುದು ಮೋದಿ ಬಗ್ಗೆ ನೀಲಾಂಜನ್ ಮುಖೊಪಾಧ್ಯಾಯ್ ಬರೆದ ಪುಸ್ತಕದಲ್ಲಿದೆ.

2015ರಲ್ಲಿ ಟೈಮ್ ಮ್ಯಾಗಝಿನ್ ಸಂದರ್ಶನದಲ್ಲಿ, ಮೋದಿ ಬಡ ಕುಟುಂಬದ ಬಗ್ಗೆ, ಬಡತನವೇ ಸ್ಫೂರ್ತಿಯಾಗಿದ್ದರ ಬಗ್ಗೆ ಹೇಳಿದ್ದಾರೆ. ತಾನು ತೀರಾ ಬಡ ಕುಟುಂಬದವನು ಎಂದು ಮೋದಿ ಅದರಲ್ಲಿ ಹೇಳಿಕೊಳ್ಳುತ್ತಾರೆ.

ಇದರಲ್ಲಿ ಸತ್ಯ ಎಷ್ಟು? ಅನೇಕರು ಎತ್ತಿರುವ ಪ್ರಶ್ನೆ ಇದು.

ಲಭ್ಯವಿರುವ ನರೇಂದ್ರ ಮೋದಿಯ ಬಾಲ್ಯದ ಚಿತ್ರ ನೋಡಿದರೆ, 1950ರಲ್ಲಿ ಹುಟ್ಟಿದ ಅವರು ಬಡ ಕುಟುಂಬದವರೇ ಆಗಿದ್ದರೆ ಅಂತಹ ಉತ್ತಮ ಉಡುಪು ಧರಿಸುವುದು ಸಾಧ್ಯವೇ ಇರಲಿಲ್ಲ.

‘ಇಂಡಿಯಾ ಟುಡೇ’ ಪ್ರಕಟಿಸಿರುವ ಮೋದಿ ಹಳೇ ಮನೆ ಚಿತ್ರ 1950ರ ಹೊತ್ತಿನ ಅತಿ ಬಡ ಕುಟುಂಬದ ಮನೆಯಂತೆ ಕಾಣಿಸುವುದೇ ಇಲ್ಲ.

ಮೋದಿಗೆ ನಾಲ್ವರು ಸೋದರರು ಮತ್ತು ಒಬ್ಬಳು ಸೋದರಿ.ಮೋದಿ ತಂದೆ ಜೀವನದುದ್ದಕ್ಕೂ ಚಹಾ ಮಾರಿಯೇ ಮಕ್ಕಳನ್ನು ಬೆಳೆಸಿದರಂತೆ.

ಮೋದಿ ತಂದೆ ಚಹಾ ಮಾರುತ್ತಿದ್ದರೇ ಹೊರತು ಮೋದಿಯಲ್ಲ, ಹಾಗೆ ಬರೆದದ್ದು ವರದಿಗಾರರ ತಪ್ಪು ಎಂದು ಮೋದಿ ಕಿರಿಯ ಸೋದರ ಪ್ರಹ್ಲಾದ್ ಮೋದಿ 2 ವರ್ಷದ ಕೆಳಗೆ ಹೇಳಿದ್ದರು.

ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ಕೂಡ 2014ರಲ್ಲಿ ಇದನ್ನೇ ಹೇಳಿದ್ದರು.

Full View

ಸಿಎನ್‌ಎನ್‌ನಲ್ಲಿ ಬಂದ ಇತ್ತೀಚಿನ ಲೇಖನದಲ್ಲಿ, ಮೋದಿಗೆ ಬಡತನವಿತ್ತು ಎಂದಿರುವುದು ಉತ್ಪ್ರೇಕ್ಷೆ ಎಂದು ಅದೇ ನೀಲಾಂಜನ್ ಮುಖೊಪಾಧ್ಯಾಯ್ ಹೇಳಿದ್ದಾರೆ. ಇದನ್ನೆಲ್ಲಾ ಜನರಲ್ಲಿ ಒಂದು ರೀತಿಯ ಭ್ರಮೆ ಸೃಷ್ಟಿಸಲು ಬಳಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಯಾಕೆ ಇಂತಹ ಕಥೆಗಳನ್ನು ಜನರೆದುರು ಉತ್ಪ್ರೇಕ್ಷಿಸಿ ಹೇಳಲಾಗುತ್ತದೆ? ಎಂಥದೇ ಕೌಟುಂಬಿಕ ಹಿನ್ನೆಲೆಯಿಂದ ಬಂದವರೂ ನಾಯಕರಾಗಬಹುದು. ಹಾಗೆಯೇ ಸರ್ವಾಧಿಕಾರಿ ಗಳೂ ಆಗಿರುವ ಉದಾಹರಣೆಗಳಿವೆ. ಬಡ ಕುಟುಂಬದಿಂದ ಬಂದವರು ಮಾತ್ರ ಒಳ್ಳೆಯ ನಾಯಕರಾಗುವುದಿಲ್ಲ. ಬಡತನದಿಂದ ಬಂದು ಸರ್ವಾಧಿಕಾರಿಗಳಾದವರೂ ಜಗತ್ತಿನ ಇತಿಹಾಸಲ್ಲಿ ಸಾಕಷ್ಟಿದ್ದಾರೆ.

ಇಲ್ಲಿಯೂ ಕೂಡ ಬಡ ಕುಟುಂಬದವರೆಂದು ಹೇಳಿಕೊಳ್ಳುವ ಮೋದಿ ಬಡವರಿಗಾಗಿ ಕೆಲಸ ಮಾಡಿಲ್ಲ.

ದೊಡ್ಡ ಕಂಪೆನಿಗಳನ್ನು ಬೆದರಿಸಿ ದೇಣಿಗೆ ಪಡೆದ ಚುನಾವಣಾ ಬಾಂಡ್ ಮಹಾ ಹಗರಣವನ್ನೂ ನೋಡಿದ್ದಾಯಿತು. ಅದಾನಿಯಂತಹ ಮೋದಿ ಮಿತ್ರರು ಈ 10 ವರ್ಷಗಳಲ್ಲಿ ಅಸಾಧಾರಣ ಶ್ರೀಮಂತರಾಗಿದ್ದಾರೆ.

ತನ್ನನ್ನು ಬಡಕುಟುಂಬದವರೆಂದು ಹೇಳಿಕೊಳ್ಳುತ್ತಲೇ ಮೋದಿ ಕಾಂಗ್ರೆಸ್ ನಾಯಕ ರಾಹುಲ್ ಅವರನ್ನು ಪ್ರತಿಷ್ಠಿತ ಕುಟುಂಬದ ವ್ಯಕ್ತಿ ಎಂದು ಬಿಂಬಿಸುವುದು ನಡೆದಿದೆ.

ಆದರೆ ಇಂದು ರಾಹುಲ್ ಬಡವರ ಬಗ್ಗೆ ಮಾತನಾಡುತ್ತಿದ್ದರೆ, ಮೋದಿ ಮಾತ್ರ ಅಂಬಾನಿ, ಅದಾನಿಯಂಥವರ ಬಗ್ಗೆಯೇ ಯೋಚಿಸುತ್ತಿದ್ದಾರೆ.

ಅವರ ಈವರೆಗಿನ ಎಲ್ಲ ನೀತಿಗಳೂ ಅದಾನಿ, ಅಂಬಾನಿ ಅಂತಹವರಿಗೇ ಲಾಭ ತಂದಿವೆ. ಆದರೆ ಕಾಂಗ್ರೆಸ್‌ಗೆ ಅಂಬಾನಿ, ಅದಾನಿಯಿಂದ ದುಡ್ಡು ಹೋಗಿದೆ ಎನ್ನುತ್ತಿದ್ದಾರೆ.

ಇನ್ನು ಮೋದಿ ಪರಿವಾರದ ವಿಚಾರ. ದೇಶಕ್ಕಾಗಿ ಮೋದಿ ಕುಟುಂಬವನ್ನೇ ಬಿಟ್ಟವರು ಎಂದು ಇದುವರೆಗೆ ಬಿಂಬಿಸಲಾಗಿದೆ.

ಗಂಡ ಹೆಂಡತಿ ಒಟ್ಟಿಗಿರಲು ಇಷ್ಟವಿಲ್ಲದೆ ಇದ್ದರೆ ಬೇರೆಯಾಗುವುದು ಸಾಮಾನ್ಯ. ಅದರಲ್ಲಿ ಅಂತಹ ಅಸಾಮಾನ್ಯತೆ ಏನಿದೆ? ಆದರೆ ಮೋದಿ ಪತ್ನಿಯನ್ನು ದೇಶಕ್ಕಾಗಿ ತ್ಯಾಗ ಮಾಡಿದರು ಎನ್ನಲಾಯಿತು. ದೇಶಕ್ಕಾಗಿ, ಸಮಾಜಕ್ಕಾಗಿ ಮಹಾನ್ ಕೊಡುಗೆ ನೀಡಿದ ದೊಡ್ಡವರು, ಮಹಾನುಭಾವರು ಅನೇಕರಿದ್ದಾರೆ. ಅವರಾರೂ ಅದಕ್ಕಾಗಿ ಪತ್ನಿಯನ್ನು ತ್ಯಜಿಸಿರಲಿಲ್ಲ.

ಆದರೆ ಇಲ್ಲಿ ಮೋದಿ ಪತ್ನಿಯನ್ನು ಬಿಟ್ಟಿದ್ದನ್ನೇ ಮೋದಿ ಭಕ್ತರು ವಾಟ್ಸ್ ಆ್ಯಪ್ ಯೂನಿವರ್ಸಿಟಿಯಲ್ಲಿ ಒಂದು ಸಾಧನೆ ಎಂಬಂತೆ ಬಿಂಬಿಸಿದರು.

ಮೋದಿ ಕೂಡ ಹಾಗೆಯೇ ಹೇಳಿಕೊಂಡು ಓಡಾಡುತ್ತಾರೆ ಮತ್ತು ತನ್ನನ್ನು ತಾನೇ ಬುದ್ದ, ಮಹಾವೀರರಿಗೆ ಹೋಲಿಸಿಕೊಳ್ಳುತ್ತಾರೆ. ಆದರೆ ಬುದ್ಧ, ಮಹಾವೀರರು ಅಧಿಕಾರಕ್ಕಾಗಿ ತ್ಯಾಗ ಮಾಡಿರಲಿಲ್ಲ. ಇದೆಂತಹ ಅಸಂಬದ್ಧ ಹಾಗೂ ಅವಮಾನಕಾರಿ ಹೋಲಿಕೆ ?

ಎಲ್ಲ ಸೆಲೆಬ್ರಿಟಿಗಳ ಕುಟುಂಬದ ಮದುವೆ, ನಿಶ್ಚಿತಾರ್ಥದಲ್ಲಿ ಭಾಗವಹಿಸುವ ಮೋದಿಗೆ ತಮ್ಮ ಕುಟುಂಬದವರನ್ನು ಕಾಣಲು ಸಮಯವಿಲ್ಲ. ಆದರೆ ಕುಟುಂಬದವರು ಹೇಳುವ ಪ್ರಕಾರ, ಅವರೆಲ್ಲ ತನ್ನಿಂದ ದೂರವಿರಬೇಕೆಂದು ಮೋದಿಯ ಸ್ಪಷ್ಟ ಸೂಚನೆಯಿದೆ.

ಶ್ರೀ ರಾಮ ಕೂಡ ತನ್ನ ಕುಟುಂಬದೊಂದಿಗೆ ಇದ್ದುಕೊಂಡೇ ಜನರಿಗಾಗಿಯೂ ಕೆಲಸ ಮಾಡಿದ್ದು.

ಕುಟುಂಬದಿಂದ ದೂರ ಇರುವುದು ಅವರ ವೈಯಕ್ತಿಕ ವಿಚಾರ ಎಂದೇ ಇಟ್ಟುಕೊಳ್ಳೋಣ, ಆದರೆ ಅದನ್ನು ಮಹಾ ಸಾಧನೆ ಎಂದೇಕೆ ಬಿಂಬಿಸಬೇಕು?

ಹೀಗೆ ಬಿಂಬಿಸಿರುವುದರ ಪರಿಣಾಮವೇ ಬಹುತೇಕ ಯುವಕರ ಬ್ರೈನ್ ವಾಷಿಂಗ್.

ಇನ್ನೊಂದೆಡೆಯಿಂದ ಇದೇ ಮೋದಿ ಮತ್ತೊಬ್ಬರ ಮನೆಯ ಹೆಣ್ಣುಮಕ್ಕಳ ಬಗ್ಗೆ ವ್ಯಂಗ್ಯವಾಡಿದ್ದೂ ಅನೇಕ ಸಲ.

ಮೋದಿ ತನ್ನನ್ನು ತಾನು ಫಕೀರ ಎಂದು ಹೇಳಿಕೊಳ್ಳುತ್ತಾರೆ. ಆದರೆ, 1 ಲಕ್ಷ 40 ಸಾವಿರ ರೂ. ಬೆಲೆಯ ಸನ್‌ಗ್ಲಾಸ್ ಹಾಕುವ, 12 ಕೋಟಿ ರೂ. ಮೌಲ್ಯದ ಮರ್ಸಿಡಿಸ್‌ನಲ್ಲಿ ಓಡಾಡುವ, ಸಾವಿರಾರು ಕೋಟಿಯ ವಿಮಾನದಲ್ಲಿ ಹಾರಾಡುವ, ದಿನಕ್ಕೆ ನಾಲ್ಕಾರು ಬಾರಿ ದುಬಾರಿ ಉಡುಪು ಬದಲಾಯಿಸುವ, ಫಕೀರನನ್ನು ನೀವು ಜಗತ್ತಿನಲ್ಲಿ ಎಲ್ಲಾದರೂ ನೋಡಿದ್ದೀರಾ?

ತಮ್ಮ ಅನುಕೂಲಕ್ಕಾಗಿ ಇವರು ರಾಮಾಯಣವನ್ನೂ ತಿರುಚಿದ್ದಾರೆ ಎಂದು ರಾಠಿ ಹೇಳುತ್ತಾರೆ. ತಮ್ಮ ದ್ವೇಷದ ಅಜೆಂಡಾಕ್ಕಾಗಿ ಕಡೆಗೆ ಧರ್ಮವನ್ನೂ ತಿರುಚಿದ್ದಾರೆ.

ಮೋದಿಯನ್ನೇ ದೇವರು, ದೇವರ ಅವತಾರ, ದೇವರೇ ಅವರನ್ನು ಈ ಭೂಮಿಗೆ ಕಳಿಸಿದ್ದಾರೆ ಎಂದು ಅದೆಷ್ಟೋ ಬಿಜೆಪಿ ಮುಖಂಡರು ಹೇಳಿದ್ದನ್ನು ನಾವು ಕೇಳಿದ್ದೇವೆ. ಮೋದಿಯನ್ನು ಶ್ರೀರಾಮನೊಂದಿಗೆ ಹೋಲಿಸುವವರೆಗೂ ಬಿಜೆಪಿ ಮುಖಂಡರು, ಬೆಂಬಲಿಗರು ಹೋಗಿದ್ದಾರೆ.

ಮೋದಿಯ ಇಮೇಜ್ ಹಾಗೂ ರಾಜಕೀಯಕ್ಕೆ ಹೊಂದಿಕೆಯಾಗು ವಂತೆ ಹಸನ್ಮುಖಿ ರಾಮ ಹಾಗೂ ಹನುಮಂತನ ಚಿತ್ರವನ್ನೇ ತಿರುಚಿ ಅವರು ಸಿಟ್ಟಲ್ಲಿರುವಂತೆ ಚಿತ್ರಿಸಿ ಅದನ್ನೇ ಎಲ್ಲೆಡೆ ಪ್ರಚಾರ ಮಾಡಲಾಗಿದೆ.

ಮಹಾ ಸರ್ವಾಧಿಕಾರಿ ಹಿಟ್ಲರ್ ಒಂದು ಕಾಲದಲ್ಲಿ ನಾನೇ ಏಸು ಎಂದು ಬಣ್ಣಿಸಿಕೊಳ್ಳುತ್ತಿದ್ದ. ತನ್ನ ರಾಜಕೀಯಕ್ಕೆ ಸೂಟ್ ಆಗುವಂತೆ ಬೈಬಲ್ ಅನ್ನೇ ತಿರುಚಿ ಬೇರೆಯೇ ಬೈಬಲ್ ಪ್ರಕಟಿಸಿದ್ದ ಎಂದು ದಾಖಲೆಗಳನ್ನು ಉಲ್ಲೇಖಿಸಿ ಹೇಳುತ್ತಾರೆ ಧ್ರುವ ರಾಠಿ.

ರಾಹುಲ್ ಅವರನ್ನು ಮಾತಿನಲ್ಲಿಯ ಸಣ್ಣ ಯಡವಟ್ಟುಗಳಿಗಾಗಿ ಆಡಿಕೊಂಡವರು, ಮೋದಿ ಹೇಳಿದ ಅಂತಹ ಎಷ್ಟೆಲ್ಲ ತಪ್ಪುಗಳನ್ನು ಅಡಗಿಸಿ ಬಿಟ್ಟಿದ್ದಾರೆ.

ಎಲ್ಲ ಕಡೆಯಲ್ಲೂ ತಾನೇ ಕಾಣಿಸಿಕೊಳ್ಳುವುದು ಕೂಡ ಮೋದಿಯ ತಂತ್ರದ ಒಂದು ಭಾಗ ಎಂಬುದನ್ನು ರಾಠಿ ಹೇಳಿದ್ದಾರೆ.

ಪೋಸ್ಟರುಗಳಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ, ಪುಸ್ತಕಗಳಲ್ಲಿ, ಸರಕಾರದ ಜಾಹೀರಾತುಗಳಲ್ಲಿ, ಕಡೆಗೆ ಕೋವಿಡ್ ಲಸಿಕೆ ಸರ್ಟಿಫಿಕೇಟ್‌ನಲ್ಲಿಯೂ ಮೋದಿ ಚಿತ್ರ ರಾರಾಜಿಸಿದೆ.

Full View

ಬಡತನದ ಹಿನ್ನೆಲೆ, ದೇಶಕ್ಕಾಗಿ ಕುಟುಂಬ ತ್ಯಾಗ, ತಾನೊಬ್ಬ ಫಕೀರ ಎಂಬುದನ್ನೆಲ್ಲ ಮೋದಿ ಪ್ರಚಾರದ ವಿಚಾರಗಳನ್ನಾಗಿ ಬಳಸಿಕೊಂಡಿರುವುದನ್ನು ರಾಠಿ ಈ ವೀಡಿಯೊದಲ್ಲಿ ವಿವರಿಸುತ್ತಾರೆ.

ಹೇಗೆ ವಾಟ್ಸ್‌ಆ್ಯಪ್ ಮಾಫಿಯಾ ಮೋದಿಯನ್ನು ಹೀಗೆ ಬಹಳ ದೊಡ್ಡ ನಾಯಕನನ್ನಾಗಿ ಮಾಡಿ ತೋರಿಸಿದೆ ಎಂಬುದನ್ನು ರಾಠಿ ತೋರಿಸಿದ್ದಾರೆ. ಮೋದಿ ಸುಳ್ಳುಗಳು ಹಾಗೂ ಪ್ರಚಾರದ ಮೂಲಕವೇ ಅಸ್ತಿತ್ವದಲ್ಲಿರಲು ಬಯಸುತ್ತಿರುವುದರ ಒಂದು ಮುಖವನ್ನು ಈ ವೀಡಿಯೊ ಹೇಳುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಿನಯ್ ಕೆ.

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!