ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸಿ

Update: 2024-02-12 03:59 GMT

ಮಾನ್ಯರೇ,

ಆಶಾ ಕಾರ್ಯಕರ್ತೆಯರು ಕಳೆದ 15 ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯಲ್ಲಿ ಅಹರ್ನಿಶಿ ತೊಡಗಿದ್ದರಿಂದಾಗಿ ಆರೋಗ್ಯ ಇಲಾಖೆಯು ವಿಕೇಂದ್ರೀಕೃತವಾಗಿ, ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಆದರೆಇಲಾಖೆಯು, ಇವರಿಗೆದುಡಿದಷ್ಟು ಪ್ರತಿಫಲ ನೀಡದೆ ವಂಚಿಸುತ್ತಿರುವುದು ಮಾತ್ರ ನೋವಿನ ಸಂಗತಿ. ಹೀಗಾಗಿ, ಅನಿವಾರ್ಯವಾಗಿರಾಜ್ಯದ 42,000ದಷ್ಟು ಬಡಆಶಾ ತಾಯಂದಿರು ಮತ್ತೊಮ್ಮೆ ಬೀದಿಗಿಳಿದು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯ ಸರಕಾರವು 8 ವರ್ಷಗಳ ಹಿಂದೆ, ಆರ್.ಸಿ.ಎಚ್ ಪೋರ್ಟಲ್‌ಗೆ ಲಿಂಕ್ ಮಾಡಿ ಗೌರವ ಧನ ನೀಡುವ ಮಾದರಿಯನ್ನು

ಜಾರಿಗೊಳಿಸಿದಾಗಿನಿಂದಲೂ, ತಾಂತ್ರಿಕ ಸಮಸ್ಯೆಗಳೂ ಸೇರಿ, ಹಲವು ಕಾರಣಗಳಿಂದಾಗಿ ಆಶಾ ಕಾರ್ಯಕರ್ತೆಯರಿಗೆವೇತನ ಸರಿಯಾಗಿ ವಿತರಣೆಯಾಗದಿರುವುದು ವಿಪರ್ಯಾಸ. ಕೇಂದ್ರ ನಿಗದಿಗೊಳಿಸಿರುವ ಸುಮಾರು 40 ಸೇವೆಗಳಿಗೆ ಪ್ರತೀ ಆಶಾಗೆ ಮಾಸಿಕ ರೂ. 7,000ದಷ್ಟು ಗೌರವಧನ ಸಿಗಬೇಕಿದ್ದರೂ, ದಾಖಲೆಗಳ ಪ್ರಕಾರ ಪ್ರತೀ ತಿಂಗಳು ಸರಾಸರಿ 10,000ದಿಂದ 12,000ದಷ್ಟು ಆಶಾಗಳು ಆರ್.ಸಿ.ಎಚ್ ಪೋರ್ಟಲ್‌ನ ಸಮಸ್ಯೆಗಳಿಂದಾಗಿಯೇ ದೊಡ್ಡ ಮೊತ್ತದ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಉಳಿದವರೂ ಮಾಸಿಕ 2,000ದಿಂದ 5,000 ರೂ.ಗಳನಷ್ಟ ಅನುಭವಿಸುತ್ತಿದ್ದಾರೆ. ಬಡ ಆಶಾಗಳ ಈ ತೀವ್ರ ಸಂಕಷ್ಟವನ್ನು ಬಗೆಹರಿಸದಿರುವಉನ್ನತಾಧಿಕಾರಿಗಳ ನಿರ್ಲಕ್ಷ್ಯಅಕ್ಷಮ್ಯ.

ದೇಶದ 26 ರಾಜ್ಯಗಳಲ್ಲಿ ಇಲ್ಲದ‘ಈ ಕೊಂಕಣ ಸುತ್ತಿ ಮೈಲಾರ ಸೇರುವ’ ವೇತನ ಮಾದರಿಯನ್ನು ನಮ್ಮರಾಜ್ಯದಲ್ಲಿ ಅಳವಡಿಸಿ, ಬಡ ಆಶಾಗಳದುಡಿತಕ್ಕೆಕನ್ನ ಹಾಕುತ್ತಿರುವುದುಪರಮ ವಂಚನೆಯಾಗಿದೆ.ಆರೋಗ್ಯ ಇಲಾಖೆ ಇನ್ನಾದರೂ ಈ ಪೋರ್ಟಲ್‌ಗೆ

ಲಿಂಕ್ ಮಾಡಿ ಪ್ರೋತ್ಸಾಹ ಧನ ನೀಡುವ ಮಾದರಿಯನ್ನು ತಕ್ಷಣವೇ ನಿಲ್ಲಿಸಿ, ಆಶಾಗಳ ಬ್ಯಾಂಕ್‌ಖಾತೆಗೆ ಪ್ರತೀ ತಿಂಗಳುನೇರವಾಗಿನಿಗದಿತಗೌರವಧನ ಹಾಕುವ ಪದ್ಧತಿ ಜಾರಿಗೊಳಿಸಬೇಕು. ನಿಗದಿಯಾಗಿರುವ ಸೇವೆಗಳನ್ನಂತೂ ಅವರುಹಗಲಿರುಳೂ ಸಮರ್ಪಕವಾಗಿ ಮಾಡುತ್ತಿದ್ದಾರೆ. ಪ್ರತೀ ಕೆಲಸಕ್ಕಿಷ್ಟೆಂಬ ಈಗಿನ ಪುಡಿ ಲೆಕ್ಕಾಚಾರದ ‘ಕಟ್‌ಪೀಸ್’ ಮಾದರಿ ಬಿಟ್ಟು, ಮಾಸಿಕ ಗೌರವಧನವನ್ನು ನಿಗದಿ ಮಾಡಿ, ನೀಡುವಂತಾದರೆ, ಅವರೂ ನೆಮ್ಮದಿಯಾಗಿ ಹಳ್ಳಿಗಾಡಿನ ಜನರಆರೋಗ್ಯ ಸೇವೆಗೆ ತಮ್ಮ ಸಮಯವನ್ನು ಮುಡುಪಾಗಿರಿಸುತ್ತಾರೆ. ಆಶಾತಾಯಂದಿರು, ತಾವು ನಿಷ್ಠೆಯಿಂದದುಡಿದಗೌರವಧನವನ್ನು ವ್ಯವಸ್ಥಿತವಾಗಿ ಪಡೆಯಲೆಂದೇ ಹೀಗೆ ಮತ್ತೆ ಮತ್ತೆ ಬೀದಿಗೆ ಬರುವಂತಾಗಿರುವಅವ್ಯವಸ್ಥೆ ನಿಲ್ಲಬೇಕು.ಮಹಿಳಾಪರವೆಂದು ಹೇಳಿಕೊಳ್ಳುವ ಪ್ರಸ್ತುತಸರಕಾರವುತಕ್ಷಣವೇಇದನ್ನುಸರಿಪಡಿಸಲುಕ್ರಮ ಕೈಗೊಳ್ಳಬೇಕು.

ರೂಪ ಹಾಸನ, ಹಾಸನ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - -ರೂಪ ಹಾಸನ, ಹಾಸನ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!