ಭಾರತದ ಟೆನಿಸ್ ಸ್ಟಾರ್ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಶುಭಾರಂಭ

Update: 2024-07-04 17:34 GMT

ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ | PC : X 

ವಿಂಬಲ್ಡನ್ : ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯದ ಮ್ಯಾಥ್ಯೂ ಎಬ್ಡೆನ್ ವಿಂಬಲ್ಡನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಬೋಪಣ್ಣ ಹಾಗೂ ಎಬ್ಡೆನ್ ಬುಧವಾರ ಒಂದು ಗಂಟೆ ಹಾಗೂ 11 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಡಚ್ ಜೋಡಿ ರಾಬಿನ್ ಹಾಸ್ ಹಾಗೂ ಸ್ಯಾಂಡರ್ ಅರೆಂಡ್ಸ್ ವಿರುದ್ಧ 7-5, 6-4 ಅಂತರದಿಂದ ಜಯ ಸಾಧಿಸಿದರು.

ಈ ಗೆಲುವಿನೊಂದಿಗೆ ಎರಡನೇ ಶ್ರೇಯಾಂಕದ ಹಾಗೂ ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ಭಾರತವು ಮುಂದಿನ ಸುತ್ತಿನಲ್ಲಿ ಜರ್ಮನಿ ಜೋಡಿ ಹೆಂಡ್ರಿಕ್ ಜೆಬೆನ್ಸ್ ಹಾಗೂ ಕಾನ್ಸ್ಟನ್ಟಿನ್ ಫ್ರಾಂಝೆನ್ರನ್ನು ಎದುರಿಸಲಿದ್ದಾರೆ.

ಬೋಪಣ್ಣ ಹಾಗೂ ಎಬ್ಡೆನ್ ಇದೇ ಟೂರ್ನಿಯಲ್ಲಿ ಕಳೆದ ವರ್ಷ ಸೆಮಿ ಫೈನಲ್ ಗೆ ತಲುಪಿದ ಸಾಧನೆ ಮಾಡಿದ್ದರು. ಪ್ರಮುಖ ಪಂದ್ಯಾವಳಿಯಲ್ಲಿ ಸತತವಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

ಮತ್ತೊಂದೆಡೆ, ಭಾರತ-ಸರ್ಬಿಯದ ಜೋಡಿ ಸುಮಿತ್ ನಾಗಲ್ ಹಾಗೂ ಡುಸಾನ್ ಲಾಜೊವಿಕ್ ಮೊದಲ ಸುತ್ತಿನಲ್ಲಿ ಸೋತು ಬೇಗನೆ ನಿರ್ಗಮಿಸಿದರು. ಒಂದು ಗಂಟೆ ಹಾಗೂ 7 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸುಮಿತ್ ಹಾಗೂ ಡುಸಾನ್ ಅವರು ಮಾರ್ಟಿನೆಝ್ ಹಾಗೂ ಮುನಾರ್ ವಿರುದ್ಧ 2-6, 2-6 ಸೆಟ್ಗಳ ಅಂತರದಿಂದ ಸೋತಿದ್ದಾರೆ.

ಪುರುಷರ ಡಬಲ್ಸ್ ವಿಭಾಗದಲ್ಲಿ ಎನ್.ಶ್ರೀರಾಮ್ ಬಾಲಾಜಿ ಹಾಗೂ ಯೂಕಿ ಭಾಂಬ್ರಿ ಕ್ರಮವಾಗಿ ಬ್ರಿಟನ್ನ ಲೂಕ್ ಜಾನ್ಸನ್ ಹಾಗೂ ಫ್ರಾನ್ಸ್ನ ಅಲ್ಬಾನೊ ಒಲಿವೆಟ್ಟಿ ಅವರೊಂದಿಗೆ ಆಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News