ಟಿ20ವಿಶ್ವಕಪ್ ಗೆದ್ದ ಭಾರತ ತಂಡ ಸ್ವದೇಶಕ್ಕೆ ತಂದಿದ್ದು ಮೂಲ ಟ್ರೋಫಿ ಅಲ್ಲ!

Update: 2024-07-05 15:44 GMT

PC : PTI 

ಮುಂಬೈ : 13 ವರ್ಷಗಳ ಕಾಯುವಿಕೆಯ ನಂತರ ಭಾರತಕ್ಕೆ ವಿಶ್ವಕಪ್ ಮರಳಿದೆ. ಭಾರತ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಇದು ಐತಿಹಾಸಿಕ ಕ್ಷಣ. ಬೆರಿಲ್ ಚಂಡಮಾರುತದಿಂದ ಬಾರ್ಬಡೋಸ್‌ನಲ್ಲೇ ಉಳಿದುಕೊಂಡಿದ್ದ ಟೀಮ್ ಇಂಡಿಯಾ ತಡವಾಗಿ ತವರಿಗೆ ಮರಳಿತು. ಮುಂಬೈ ಬೀದಿಯಲ್ಲಿ ಕಿಕ್ಕಿರಿದು ತುಂಬಿದ್ದ ಜನ ಸಮೂಹದ ನಡುವೆ ತೆರೆದ ಬಸ್ ನಲ್ಲಿ ಭಾರತ ಟಿ20 ತಂಡದ ವಿಜಯೋತ್ಸವ ಯಾತ್ರೆ ನಡೆಯಿತು.

ಟಿ20 ವಿಶ್ವಕಪ್ ಟ್ರೋಫಿಯನ್ನು ಹಿಡಿದು ಭಾರತ ಕ್ರಿಕೆಟ್ ತಂಡದ ಸದಸ್ಯರು ತಮ್ಮ ಜೀವಮಾನದನಲ್ಲಿ ನೆನಪಿನಲ್ಲುಳಿಯುವ ಸಾಧನೆಯನ್ನು ಸಂಭ್ರಮಿಸಿದರು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟ್ರೋಫಿ ಪಕ್ಕದಲ್ಲೇ ಮಲಗಿದ್ದ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇಲ್ಲೊಂದು ಸ್ವಾರಸ್ಯಕರ ವಿಚಾರವಿದೆ. ಈಗ ಭಾರತ ಕ್ರಿಕೆಟ್ ತಂಡ ಹೊಂದಿರುವ ಟ್ರೋಫಿ ಅಸಲಿ ಟಿ20 ವಿಶ್ವಕಪ್ ಟ್ರೋಫಿ ಅಲ್ಲ. ಅದು ಮೂಲ ಟಿ20 ವಿಶ್ವಕಪ್ ಟ್ರೋಫಿಯ ಪ್ರತಿಕೃತಿ!

ಟಿ20 ವಿಶ್ವಕಪ್ ವಿಜೇತ ತಂಡವು ಫೈನಲ್ ಪಂದ್ಯದ ನಂತರ ಫೊಟೋ ಶೂಟ್ ಗಾಗಿ ಮಾತ್ರ ಅಸಲಿ ಟ್ರೋಫಿಯನ್ನು ಪಡೆಯುತ್ತಾರೆ. ತಮ್ಮ ದೇಶಕ್ಕೆ ಕೊಂಡೊಯ್ಯಲು ಅವರಿಗೆ ವಿಶ್ವಕಪ್ ಟ್ರೋಫಿಯ ಪ್ರತಿಕೃತಿಯನ್ನು ನೀಡಲಾಗುತ್ತದೆ. ಬಳಿಕ ಅದನ್ನು ಐಸಿಸಿ ಕೇಂದ್ರ ಕಚೇರಿಯಲ್ಲಿ ಭದ್ರವಾಗಿ ಇಡಲಾಗುತ್ತದೆ. ವಿಶ್ವಕಪ್ ಮೂಲ ಟ್ರೋಫಿಯನ್ನು ವಿನ್ಯಾಸ ಮಾಡುವಾಗ ಬೆಳ್ಳಿಯ ಪ್ರತಿಕೃತಿ ಟ್ರೋಫಿಯನ್ನೂ ವಿನ್ಯಾಸ ಮಾಡುತ್ತಾರೆ. ಅದೇ ಪ್ರತಿಕೃತಿ ಟ್ರೋಫಿಯನ್ನು ಟೀಮ್ ಇಂಡಿಯಾ ತವರಿಗೆ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News