ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಲಕ್ಷ್ಯಸೇನ್ ಹೋರಾಟ ಅಂತ್ಯ

Update: 2024-03-17 03:49 GMT

Photo: twitter.com/toisports

ಲಂಡನ್: ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಸೆಮಿಫೈನಲ್ ನಲ್ಲಿ ಭಾರತದ ಲಕ್ಷ್ಯ ಸೇನ್ ಅವರು ಇಂಡೋನೇಷ್ಯಾದ ಜೋನಾಥನ್ ಕ್ರಿಸ್ಟಿ ವಿರುದ್ಧ ಆಘಾತಕಾರಿ ಸೋಲು ಅನುಭವಿಸುವ ಮೂಲಕ ಅವರ ಗೆಲುವಿನ ಅಭಿಯಾನ ಅಂತ್ಯಗೊಂಡಿತು.

ಮೊದಲ ಗೇಮ್ ನಲ್ಲಿ 21-12 ಅಂತರದ ಗೆಲುವು ಸಾಧಿಸಿದ್ದ ಕ್ರಿಸ್ಟೀನ್ ಎರಡನೇ ಗೇಮ್ ನಲ್ಲಿ 10-21 ಅಂಕಗಳಿಂದ ಸೋತರು. ನಿರ್ಣಾಯಕವಾಗಿದ್ದ ಮೂರನೇ ಗೇಮ್ ನಲ್ಲಿ ಕ್ರಿಸ್ಟೀನ್ 21-15 ಅಂತರದಲ್ಲಿ ಗೆಲುವಿನ ನಗೆ ಬೀರಿದರು.

ಮೊದಲ ಗೇಮ್ ನಲ್ಲಿ ಸೋಲು ಅನುಭವಿಸಿದರೂ ಲಕ್ಷ್ಯ ಸೇನ್ ಎರಡನೇ ಗೇಮ್ ನಲ್ಲಿ ಅದ್ಭುತ ಆಟ ಪ್ರದರ್ಶಿಸಿ ಅಧಿಕಾರಯುತ ಜಯ ಸಾಧಿಸಿದರು. ನಿರ್ಣಾಯಕ ಗೇಮ್ ನ ಆರಾಂಭದಲ್ಲಿ ಸೇನ್ ಪ್ರಾಬಲ್ಯ ಸ್ಥಾಪಿಸಿದರೂ, ಒಮ್ಮೆ ಲಯ ಕಂಡುಕೊಂಡ ಕ್ರಿಸ್ಟೀನ್ ಬಳಿಕ ತಿರುಗಿ ನೋಡಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News