ಬ್ಯಾಡ್ಮಿಂಟನ್ ಡಬಲ್ಸ್ : ಸಿ ಗುಂಪಿನಲ್ಲಿ ಭಾರತಕ್ಕೆ ಅಗ್ರ ಸ್ಥಾನ
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಸ್ಪರ್ಧಾವಳಿಯಲ್ಲಿ ಇಂಡೋನೇಶ್ಯ ದ ಜೋಡಿ ಮುಹಮ್ಮದ್ ರಿಯಾನ್ ಹಾಗೂ ಫಜರ್ ಅಲ್ಫಿಯಾನ್ ರನ್ನು ನೇರ ಗೇಮ್ ಗಳ ಅಂತರದಿಂದ ಸದೆಬಡಿದ ಭಾರತದ ಸ್ಟಾರ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಸಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.
ಮೂರನೇ ಶ್ರೇಯಾಂಕದ ಭಾರತದ ಜೋಡಿ ಸಾತ್ವಿಕ್-ಚಿರಾಗ್ ಮಂಗಳವಾರ ಕೇವಲ 38 ನಿಮಿಷಗಳಲ್ಲಿ ಕೊನೆಗೊಂಡಿರುವ ಕೊನೆಯ ಸಿ ಗುಂಪಿನ ಪಂದ್ಯದಲ್ಲಿ ಇಂಡೋನೇಶ್ಯದ ಎದುರಾಳಿಯನ್ನು 21-13, 21-13 ನೇರ ಗೇಮ್ಗಳ ಅಂತರದಿAದ ಮಣಿಸಿದರು.
ಜರ್ಮನಿ ಜೋಡಿ ಸ್ಪರ್ಧೆಯಿಂದ ಹಿಂದೆ ಸರಿದ ನಂತರ ಫ್ರಾನ್ಸ್ ತಂಡ ಇಂಡೋನೇಶ್ಯಕ್ಕೆ ಸೋತ ಬಳಿಕ ಹಾಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಸೋಮವಾರವೇ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟು ಇತಿಹಾಸ ನಿರ್ಮಿಸಿತ್ತು. ಹೀಗಾಗಿ ಮಂಗಳವಾರದ ಪಂದ್ಯವು ಸಿ ಗುಂಪಿನಲ್ಲಿ ಅಗ್ರ ಸ್ಥಾನಿ ಯಾರೆಂಬುದನ್ನು ನಿರ್ಧರಿಸುವುದಕ್ಕೆ ಮುಖ್ಯ ಎನಿಸಿತ್ತು.