ಭಾರತದಲ್ಲಿ ಎರಡನೇ ಕನಿಷ್ಠ ಸ್ಕೋರ್ ಗಳಿಸಿದ ಬಾಂಗ್ಲಾದೇಶ

Update: 2024-09-20 15:24 GMT

PC ; PTI

ಚೆನ್ನೈ : ಭಾರತ ವಿರುದ್ಧ ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಕೇವಲ 149 ರನ್‌ಗೆ ಆಲೌಟಾಗಿದೆ. ಈ ಮೂಲಕ ಭಾರತ ನೆಲದಲ್ಲಿ ಎರಡನೇ ಕನಿಷ್ಠ ಸ್ಕೋರ್ ದಾಖಲಿಸಿದೆ.

ಮೂರು ಸೆಶನ್‌ನೊಳಗೆ ಗಂಟೆಮೂಟೆ ಕಟ್ಟಿರುವ ಬಾಂಗ್ಲಾದೇಶವು ಭಾರತಕ್ಕೆ ಮೊದಲ ಇನಿಂಗ್ಸ್‌ನಲ್ಲಿ 227 ರನ್ ಮುನ್ನಡೆ ಬಿಟ್ಟುಕೊಟ್ಟಿದೆ. 50 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿದ ಜಸ್‌ಪ್ರಿತ್ ಬುಮ್ರಾ 400 ಅಂತರ್‌ರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದ ಭಾರತದ ಆರನೇ ವೇಗದ ಬೌಲರ್ ಎನಿಸಿಕೊಂಡರು.

ಭಾರತದಲ್ಲಿ ಬಾಂಗ್ಲಾದೇಶ ಗಳಿಸಿದ ಕನಿಷ್ಠ ಟೆಸ್ಟ್ ಸ್ಕೋರ್

106(ನವೆಂಬರ್ 22,2019-ಈಡನ್ ಗಾರ್ಡನ್ಸ್, ಕೋಲ್ಕತಾ)

150(ನವೆಂಬರ್ 14,2019-ಹೋಲ್ಕರ್ ಕ್ರಿಕೆಟ್ ಸ್ಟೇಡಿಯಮ್, ಇಂದೋರ್)

195(ನವೆಂಬರ್ 22,2019-ಈಡನ್ ಗಾರ್ಡನ್ಸ್, ಕೋಲ್ಕತಾ)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News