ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್‌ಶಿಪ್: ಟ್ರೀಸಾ-ಗಾಯತ್ರಿ ಪ್ರಿ-ಕ್ವಾರ್ಟರ್ ಫೈನಲ್‌ಗೆ
Update: 2023-08-23 16:06 GMT
ಹೊಸದಿಲ್ಲಿ: ಭಾರತದ ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಬುಧವಾರ 38 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ ನಂ.19ನೇ ಜೋಡಿ ಗಾಯತ್ರಿ ಹಾಗೂ ಟ್ರೀಸಾ ಚೈನೀಸ್ ತೈಪೆಯ ಚಾಂಗ್ ಚಿಂಗ್ ಹುಯ್ ಹಾಗೂ ಯಾಂಗ್ ಚಿಂಗ್ ಟ್ಯುನ್‌ರನ್ನು 21-18, 21-10 ಗೇಮ್‌ಗಳ ಅಂತರದಿಂದ ಮಣಿಸಿದರು.
ಗಾಯತ್ರಿ ಹಾಗೂ ಟ್ರೀಸಾ ಕಳೆದ ಎರಡು ಆವೃತ್ತಿಗಳಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು.
ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಗಾಯತ್ರಿ-ಟ್ರೀಸಾ ಮುಂದಿನ ಸುತ್ತಿನಲ್ಲಿ ಚೀನಾದ ಚೆನ್ ಕ್ವಿಂಗ್ ಚೆನ್ ಹಾಗೂ ಜಿಯಾ ಯಿ ಫ್ಯಾನ್‌ರನ್ನು ಎದುರಿಸಲಿದ್ದಾರೆ.