ಇಂಗ್ಲೆಂಡ್ ವಿರುದ್ಧ ಜುರೇಲ್ ದಿಟ್ಟ ಹೋರಾಟ: ಚೊಚ್ಚಲ ಅರ್ಧಶತಕ ಸಿಡಿಸಿ ಭಾರತಕ್ಕೆ ಆಸರೆ

Update: 2024-02-25 06:40 GMT

Photo: X/BCCI

ರಾಂಚಿ: ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ 307ಕ್ಕೆ ಆಲೌಟ್ ಆಗಿದ್ದು, 46 ರನ್‌ಗಳ ಹಿನ್ನಡೆಗೊಳಗಾಗಿದೆ. ಯುವ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ ಅವರ ಆಕರ್ಷಕ 90 ರನ್ ನೆರವಿನಿಂದ ಭಾರತ 300 ರ ಗಡಿ ದಾಟಿತು.

103.2 ಓವರ್‌ಗಳಲ್ಲಿ 307 ರನ್ ಗೆ ಭಾರತ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್ ಪರ ಸ್ಪಿನ್ನರ್ ಶೋಯಬ್ ಬಶೀರ್ 5 ವಿಕೆಟ್‌ ಪಡೆದು ಮಿಂಚಿದರು. ಟಾಮ್ ಹಾರ್ಟ್ಲಿ 3 ಹಾಗೂ ಜೇಮ್ಸ್ ಆ್ಯಂಡರ್ಸನ್ 2 ವಿಕೆಟ್ ಗಳಿಸಿದರು.

ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದ ಜುರೇಲ್ ಕೇವಲ 10 ರನ್‌ ಗಳಿಂದ ಚೊಚ್ಚಲ ಶತಕ ವಂಚಿತರಾದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News