ಟಿ20 ವಿಶ್ವಕಪ್ 2024ಕ್ಕೆ ತಂಡಕ್ಕೆ ವಾಪಸ್ಸಾಗುವ ಸುಳಿವು ನೀಡಿದ ಫಾಫ್ ಡುಪ್ಲಿಸಿಸ್

Update: 2023-12-06 13:48 GMT

Photo:sportzpoint.com

ಅಬುದಾಭಿ : ಮುಂದಿನ ವರ್ಷ 2024ರ ಜೂನ್ ನಿಂದ ನಡೆಯುವ ಟಿ20 ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡುಪ್ಲಿಸಿಸ್ ತಂಡಕ್ಕೆ ಮರಳುವ ಸುಳಿವನ್ನು ನೀಡಿದ್ದಾರೆ.

ಅಬುದಾಭಿಯಲ್ಲಿ ನಡೆಯುತ್ತಿರುವ ಟಿ10 ಲೀಗ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ದಕ್ಷಿಣ ಆಫ್ರೀಕಾ ತಂಡದ ಮಾಜಿ ನಾಯಕ ಫಾಫ್ ಡುಪ್ಲಿಸಿಸ್ ತಮ್ಮ ಮರಳುವಿಕೆಯ ಸುಳಿವು ನೀಡಿದರು.

2020ರಲ್ಲಿ ಡುಪ್ಲಿಸಿಸ್ ಅವರು ಕೊನೆಯ ಟ್ವೆಂಟಿ20 ಪಂದ್ಯವನ್ನು ಆಡಿದ್ದರು. ನಂತರ 2021ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿದ್ದರು.

ಆನಂತರ ಡೂಪ್ಲಿಸಿಸ್ ಅವರು ದಕ್ಷಿಣ ಆಫ್ರಿಕಾ ಪರವಾಗಿ ಮೂರು ವರ್ಷಗಳ ಕಾಲ ಯಾವುದೇ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಆಡಿರಲಿಲ್ಲ. 2023ರಲ್ಲಿ ಆರ್ಸಿಬಿ ಪರ ಐಪಿಎಲ್ ಆಡಿದ್ದ ಅವರು, 14 ಪಂದ್ಯಗಳಿಂದ 730 ರನ್ ಗಳಿಸಿ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಆಗಿದ್ದರು.

39ವರ್ಷದ ಫಾಫ್ ಡುಪ್ಲಿಸಿಸ್ ಅವರು 2014 ಮತ್ತು 2016ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದರು. ಆದರೆ ವೈಟ್ ಬಾಲ್ ಕ್ರಿಕೆಟ್ ನಿಂದ ಅಧಿಕೃತವಾಗಿ ನಿವೃತ್ತಿ ಆಗದಿದ್ದರೂ ಪಂದ್ಯಾವಳಿಯ ಕೊನೆಯ ಎರಡು ಆವತ್ತಿಗಳಲ್ಲಿ ಆಡಿರಲಿಲ್ಲ.

ಮಾಧ್ಯಮದವರೊಂದಿಗೆ ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ವೈಟ್-ಬಾಲ್ ಕೋಚ್ ಆಗಿರುವ ವಾಲ್ಟರ್ ಅವರು “ಡುಪ್ಲೆಸಿಸ್, ಕ್ವಿಂಟನ್ ಡಿ ಕಾಕ್ ಮತ್ತು ರಿಲೀ ರೊಸ್ಸೌವ್ ಅವರನ್ನು ಮುಂದಿನ ವರ್ಷ ಜೂನ್ ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯುವ ಟಿ20 ವಿಶ್ವಕಪ್ ಮತ್ತು ಎಸ್ಎ20 ನಲ್ಲಿ ಆಡುವ ಅವಕಾಶ ಪಡೆಯುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News