146 ವರ್ಷಗಳಲ್ಲಿ ಇದೇ ಮೊದಲು ವಿಶ್ವ ಕ್ರಿಕೆಟ್‌ ನಲ್ಲಿ ವಿರಾಟ್ ಕೊಹ್ಲಿ ವಿಶಿಷ್ಟ ದಾಖಲೆ

Update: 2023-12-29 18:08 GMT

Photo: twitter.com/BCCI

ಹೊಸದಿಲ್ಲಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ವಿಶಿಷ್ಟ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್ನಲ್ಲಿ ಮೂರೇ ದಿನಗಳಲ್ಲಿ ಮೊದಲ ಟೆಸ್ಟ್ ಅಂತ್ಯಗೊಂಡಿದ್ದು ಭಾರತ ಇನಿಂಗ್ಸ್ ಹಾಗೂ 32 ಅಂತರದಿಂದ ಹೀನಾಯವಾಗಿ ಸೋತಿತ್ತು. ಆದರೆ ಇದೇ ಪಂದ್ಯದಲ್ಲಿ ಏಳು ವಿವಿಧ ಕ್ಯಾಲೆಂಡರ್ ವರ್ಷಗಳಲ್ಲಿ 2,000ಕ್ಕೂ ಅಧಿಕ ರನ್ ಗಳಿಸಿದ ಕೊಹ್ಲಿ ವಿಶಿಷ್ಟ ದಾಖಲೆ ಬರೆದಿದ್ದಾರೆ. ಈ ಮೂಲಕ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಮುರಿದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಪ್ರಥಮ ಟೆಸ್ಟ್‌ ನ ಎರಡನೇ ಇನಿಂಗ್ಸ್‌ ನಲ್ಲಿ ವೇಗಿಗಳಾದ ಕಾಗಿಸೊ ರಬಾಡ, ಮಾರ್ಕೊ ಜಾನ್ಸನ್ ಹಾಗೂ ನಾಂಡ್ರೆ ಬರ್ಗೆರ್ ಬೌಲಿಂಗ್ ದಾಳಿಗೆ ಭಾರತದ ಬ್ಯಾಟರ್ಗಳು ತರಗೆಲೆಗಳಂತೆ ಉದುರಿ ಹೋಗಿದ್ದರು. ಆಗ 82 ಎಸೆತಗಳಲ್ಲಿ 76 ರನ್ ಗಳಿಸಿದ ಕೊಹ್ಲಿ ಏಕಾಂಗಿ ಹೋರಾಟ ನೀಡಿದ್ದರು. 2023ರ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 2,048 ರನ್ ಗಳಿಸಿದರು.

ವಿರಾಟ್ ಕೊಹ್ಲಿ ಈ ವರ್ಷ 36 ಇನಿಂಗ್ಸ್ ಗಳಲ್ಲಿ 66.06 ಸರಾಸರಿಯಲ್ಲಿ 8 ಶತಕ ಹಾಗೂ 10 ಅರ್ಧಶತಕಗಳ ಸಹಿತ 2,048 ರನ್ ಗಳಿಸಿದ್ದಾರೆ.

ಕೊಹ್ಲಿ ಈ ಹಿಂದೆ 2012(2,186 ರನ್), 2014(2,286 ರನ್), 2016(2,595 ರನ್), 2017(2,818 ರನ್), 2018(2,735 ರನ್) ಹಾಗೂ 2019(2,455 ರನ್) ರನ್ ಗಳಿಸಿದ ಸಾಧನೆ ಮಾಡಿದ್ದರು. ಅಧಿಕೃತ ದಾಖಲೆಯ ಪ್ರಕಾರ 1877ರಲ್ಲಿ ಮೊದಲ ಬಾರಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡಿದ ನಂತರ ಯಾವೊಬ್ಬ ಆಟಗಾರನು ಈ ಸಾಧನೆ ಮಾಡಿಲ್ಲ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News