ಆಸ್ಟ್ರೇಲಿಯದ ಹಾಕಿ ಪ್ರವಾಸ : ಭಾರತದ ಮಹಿಳಾ ತಂಡ ಪ್ರಕಟ
Photo - Hockey India
ಹೊಸದಿಲ್ಲಿ: ಮುಂಬರುವ ಆಸ್ಟ್ರೇಲಿಯ ಹಾಕಿ ಪ್ರವಾಸಕ್ಕೆ ಭಾರತದ 26 ಸದಸ್ಯರ ಮಹಿಳಾ ತಂಡವನ್ನು ಪ್ರಕಟಿಸಲಾಗಿದ್ದು, ಮಿಡ್ ಫೀಲ್ಡರ್ ಸಲಿಮಾ ಟೇಟೆ ನಾಯಕಿಯಾಗಿ ತಂಡವನ್ನು ಮುನ್ನಡೆಸಿದರೆ, ಐವರು ಹೊಸ ಮುಖಗಳು ಸೀನಿಯರ್ ತಂಡದಲ್ಲಿ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ.
ಭಾರತದ ಹಾಕಿ ತಂಡದ ಆಸ್ಟ್ರೇಲಿಯ ಪ್ರವಾಸವು 2025ರ ಎಪ್ರಿಲ್ 26ರಿಂದ ಮೇ 4ರ ತನಕ ನಡೆಯಲಿದೆ.
ಭಾರತ ತಂಡವು ಆಸ್ಟ್ರೇಲಿಯ ‘ಎ’ ವಿರುದ್ಧ 2 ಪಂದ್ಯಗಳು ಹಾಗೂ ಆಸ್ಟ್ರೇಲಿಯ ಸೀನಿಯರ್ ತಂಡದ ವಿರುದ್ಧ 3 ಪಂದ್ಯಗಳನ್ನು ಆಡಲಿದೆ.
ಫಾರ್ವರ್ಡ್ ಆಟಗಾರ್ತಿ ನವನೀತ್ ಕೌರ್ ಉಪ ನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದು, ಸವಿತಾ ಹಾಗೂ ಬಿಚು ದೇವಿ ಖರಿಬಮ್ ಗೋಲ್ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಜ್ಯೋತಿ ಸಿಂಗ್, ಇಶಿಕಾ ಚೌಧರಿ, ಸುಶೀಲಾ ಚಾನು, ಸುಜಾತಾ ಕುಜುರ್, ಸುಮನ್ ದೇವಿ, ಜ್ಯೋತಿ, ಅಜ್ಮಿನಾ ಕುಜುರ್, ಸಾಕ್ಷಿ ರಾಣಾ ಡಿಫೆಂಡರ್ಗಳಾಗಿ, ಸಲಿಮಾ ಟೇಟೆ, ವೈಷ್ಣವಿ ವಿಠಲ್ ಫಾಲ್ಕೆ, ನೇಹಾ, ಶರ್ಮಿಳಾ ದೇವಿ, ಮನಿಶಾ ಚೌಹಾಣ್, ಸುನೆಲಿತಾ ಟೊಪ್ಪೊ, ಮಹಿಮಾ ಟೇಟೆ,ಪೂಜಾ ಯಾದವ್ ಮಿಡ್ ಫೀಲ್ಡರ್ಗಳಾಗಿದ್ದಾರೆ.
ಫಾರ್ವರ್ಡ್ ವಿಭಾಗದಲ್ಲಿ ನವನೀತ್ ಕೌರ್, ದೀಪಿಕಾ, ಋತುಜಾ ದಾದಾಸೊ ಪಿಸಾಲ್, ಮುಮ್ತಾಝ್ ಖಾನ್, ಬಲ್ಜೀತ್ ಕೌರ್,ದೀಪಿಕಾ ಸೊರೆಂಗ್, ಬ್ಯೂಟಿ ಡಂಗ್ಡಂಗ್ ಅವರಿದ್ದಾರೆ.
ಹೊಸ ಮುಖಗಳಾದ ಜ್ಯೋತಿ ಸಿಂಗ್, ಸುಜಾತಾ ಕುಜುರ್, ಅಜ್ಮೀನಾ ಕುಜುರ್, ಪೂಜಾ ಯಾದವ್, ಮಹಿಮಾ ಟೇಟೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಬನ್ಸಾರಿ ಸೋಲಂಕಿ(ಗೋಲ್ಕೀಪರ್), ಅಂಜನಾ ಡಂಗ್ಡಂಗ್,ಲಾಲ್ತಾಂಟ್ಲುಯಾಂಗಿ(ಡಿಫೆಂಡರ್ಗಳು), ಸಾಕ್ಷಿ ಶುಕ್ಲಾ, ಖೈಡೆಮ್ಶೀಲೆಮಾ ಚಾನು(ಮಿಡ್ಫೀಲ್ಡರ್ಗಳು), ದೀಪಿ ಮೊನಿಕಾ ಟೊಪ್ಪೊ, ಸೋನಮ್(ಫಾರ್ವರ್ಡ್ಗಳು)ಮೀಸಲು ಆಟಗಾರ್ತಿಯರಾಗಿದ್ದಾರೆ.