ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ: ಅರ್ಷದೀಪ್ ನಾಮನಿರ್ದೇಶನ

Update: 2024-12-29 16:12 GMT

 ಅರ್ಷದೀಪ್ ಸಿಂಗ್ | PC : PTI 

ಹೊಸದಿಲ್ಲಿ: ಭಾರತದ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಈ ವರ್ಷ ಶ್ರೇಷ್ಠ ಪ್ರದರ್ಶನ ನೀಡಿದ ನಂತರ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಯ ಕಿರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಸ್ಮರಣೀಯ ಪ್ರದರ್ಶನ ಸಹಿತ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದನ್ನು ಗುರುತಿಸಿ ಈ ನಾಮನಿರ್ದೇಶನ ಮಾಡಲಾಗಿದೆ.

ಅರ್ಷದೀಪ್ ಅವರು ಝಿಂಬಾಬ್ವೆಯ ಸಿಕಂದರ್ ರಝಾ, ಆಸ್ಟ್ರೇಲಿಯದ ಟ್ರಾವಿಸ್ ಹೆಡ್ ಹಾಗೂ ಪಾಕಿಸ್ತಾನದ ಬಾಬರ್ ಆಝಮ್ ಅವರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.

ಅರ್ಷದೀಪ್ 2024ರಲ್ಲಿ ಕೇವಲ 18 ಪಂದ್ಯಗಳಲ್ಲಿ 36 ವಿಕೆಟ್‌ಗಳನ್ನು ಕಬಳಿಸಿ 13.5 ಬೌಲಿಂಗ್ ಸರಾಸರಿ ಕಾಯ್ದುಕೊಂಡು ಗಮನ ಸೆಳೆದಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಎರಡನೇ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ವೇಗದ ಬೌಲರ್ ಆಗಿದ್ದಾರೆ. 2022ರಲ್ಲಿ ಭುವನೇಶ್ವರ ಕುಮಾರ್ 37 ವಿಕೆಟ್‌ಗಳನ್ನು ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News