ಐಪಿಎಲ್ | ಋತುರಾಜ್ ಗಾಯಕ್ವಾಡ್ ಬದಲಿಗೆ ಸಿಎಸ್‌ಕೆ ಗೆ ಆಯುಷ್ ಮ್ಹಾತ್ರೆ

Update: 2025-04-15 20:50 IST
ಐಪಿಎಲ್ | ಋತುರಾಜ್ ಗಾಯಕ್ವಾಡ್ ಬದಲಿಗೆ ಸಿಎಸ್‌ಕೆ ಗೆ ಆಯುಷ್ ಮ್ಹಾತ್ರೆ

ಋತುರಾಜ್ ಗಾಯಕ್ವಾಡ್ , ಆಯುಷ್ ಮ್ಹಾತ್ರೆ | NDTV

  • whatsapp icon

ಮುಂಬೈ: ಗಾಯಗೊಂಡಿರುವ ನಾಯಕ ಋತುರಾಜ್ ಗಾಯಕ್ವಾಡ್ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ)ತಂಡವು ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳಿಗಾಗಿ ಮುಂಬೈನ 17ರ ಹರೆಯದ ಆರಂಭಿಕ ಬ್ಯಾಟರ್ ಆಯುಷ್ ಮ್ಹಾತ್ರೆ ಅವರನ್ನು 30 ಲಕ್ಷ ರೂ.ಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಮ್ಹಾತ್ರೆ ಇನ್ನೂ ಟಿ20 ಪಂದ್ಯವನ್ನು ಆಡಿಲ್ಲ. ಆದರೆ 7 ಲಿಸ್ಟ್ ಎ ಪಂದ್ಯಗಳಲ್ಲಿ 2 ಶತಕಗಳನ್ನು ಗಳಿಸಿದ್ದಾರೆ. ನಾಗಾಲ್ಯಾಂಡ್ ವಿರುದ್ಧ 117 ಎಸೆತಗಳಲ್ಲಿ 15 ಬೌಂಡರಿ ಹಾಗೂ 11 ಸಿಕ್ಸರ್‌ಗಳನ್ನು ಒಳಗೊಂಡ 181 ರನ್ ಹಾಗೂ ಸೌರಾಷ್ಟ್ರದ ವಿರುದ್ದ 93 ಎಸೆತಗಳಲ್ಲಿ 13 ಬೌಂಡರಿ, 9 ಸಿಕ್ಸರ್‌ಗಳ ಸಹಿತ 148 ರನ್ ಗಳಿಸಿದ್ದರು. ಆಫ್ ಸ್ಪಿನ್‌ನಲ್ಲಿ ಬೌಲಿಂಗ್ ಮಾಡಬಲ್ಲ ಮ್ಹಾತ್ರೆ 4 ಇನಿಂಗ್ಸ್‌ಗಳಲ್ಲಿ 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News