ಸನ್‌ರೈಸಸ್ ಹೈದರಾಬಾದ್ ಐಪಿಎಲ್ ಟ್ರೋಫಿ ಗೆಲ್ಲಲಿದೆ : ಭುವನೇಶ್ವರ ಕುಮಾರ್ ವಿಶ್ವಾಸ

Update: 2024-05-25 22:06 IST
ಸನ್‌ರೈಸಸ್ ಹೈದರಾಬಾದ್ ಐಪಿಎಲ್ ಟ್ರೋಫಿ ಗೆಲ್ಲಲಿದೆ : ಭುವನೇಶ್ವರ ಕುಮಾರ್ ವಿಶ್ವಾಸ

ಭುವನೇಶ್ವರ ಕುಮಾರ್ | PTI  

  • whatsapp icon

ಹೊಸದಿಲ್ಲಿ : ಸನ್‌ರೈಸರ್ಸ್ ಹೈದರಾಬಾದ್ ತಂಡ ರವಿವಾರ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಮ್‌ನಲ್ಲಿ ನಡೆಯುವ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಫೈನಲ್ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದು, ನಮ್ಮ ತಂಡ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲಿದೆ ಎಂದು ವೇಗದ ಬೌಲರ್ ಭುವನೇಶ್ವರ ಕುಮಾರ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಡೆದ ಕ್ವಾಲಿಫೈಯರ್-2ರಲ್ಲಿ ಸನ್‌ರೈಸರ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 36 ರನ್ ಅಂತರದಿಂದ ಮಣಿಸಿ ಫೈನಲ್‌ಗೆ ತಲುಪಿತ್ತು. ಆರು ವರ್ಷಗಳಲ್ಲಿ ಇದೇ ಮೊದಲ ಬಾರಿ ಸನ್‌ರೈಸರ್ಸ್ ತಂಡ ಫೈನಲ್‌ನಲ್ಲಿ ಆಡಲಿದೆ. 2018ರಲ್ಲಿ ಕೊನೆಯ ಬಾರಿ ಫೈನಲ್‌ಗೆ ತಲುಪಿತ್ತು. ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲುಂಡಿತ್ತು.

ಕಳೆದ ಮೂರು ಆವೃತ್ತಿಯ ಐಪಿಎಲ್‌ನಲ್ಲಿ ಹೈದರಾಬಾದ್ ತಂಡ ಪ್ಲೇ ಆಫ್‌ಗೆ ತಲುಪುವಲ್ಲಿಯೂ ವಿಫಲವಾಗಿತ್ತು. ಕಳೆದ ಆವೃತ್ತಿಯ ಐಪಿಎಲ್‌ನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು.

ನಾವು ಕಳೆದ ಮೂರು ವರ್ಷಗಳಿಂದ ಪ್ಲೇ ಆಫ್‌ನಲ್ಲಿ ಆಡದ ಕಾರಣ ನಮಗೆ ವಿಭಿನ್ನ ಅನುಭವವಾಗುತ್ತಿದೆ. ನಾನು ಈ ಬಾರಿ ಆಡಿರುವ ರೀತಿ, ಫೈನಲ್‌ಗೆ ತಲುಪಿದಾಗ ಆದ ಅನುಭವ ಅಮೋಘವಾಗಿದೆ. ಪ್ರತಿಯೊಬ್ಬರು ತಮ್ಮ ಕೊಡುಗೆ ನೀಡಿದ್ದು, ಇದು ಅದ್ಭುತ ಟೀಮ್ ವರ್ಕ್ ಆಗಿದೆ. ಐಪಿಎಲ್ ಪ್ರಶಸ್ತಿ ಜಯಿಸುವುದು ನಿಜವಾಗಿಯೂ ವಿಶೇಷವಾದುದು. ನಾವೀಗ ಫೈನಲ್‌ಗೆ ತಲುಪಿದ್ದು ಖಂಡಿತವಾಗಿಯೂ ಟ್ರೋಫಿ ಗೆಲ್ಲುತ್ತೇವೆ ಎಂದು ಭುವನೇಶ್ವರ್ ಜಿಯೋ ಸಿನೆಮಾಕ್ಕೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News