ಮ್ಯಾರಥಾನ್ ನಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಕೆನ್ಯಾದ ಕೆಲ್ವಿನ್‌ ಕಿಪ್ಟಮ್ ರಸ್ತೆ ಅಪಘಾತದಲ್ಲಿ ಮೃತ್ಯು

Update: 2024-02-12 07:00 GMT

ಕೆಲ್ವಿನ್‌ ಕಿಪ್ಟಮ್ (Photo:X/@RailaOdinga)

ಕೆನ್ಯಾ: ಕೆನ್ಯಾದ ಮ್ಯಾರಥಾನ್‌ ವಿಶ್ವ ರೆಕಾರ್ಡ್‌ ಹೊಂದಿದ ಅಥ್ಲೀಟ್‌ ಕೆಲ್ವಿನ್‌ ಕಿಪ್ಟಮ್ ಅವರು ಕಾರು ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ..

24 ವರ್ಷದ ಕೆಲ್ವಿನ್‌ ಅವರು ಕಪ್ಟಗಾಟ್‌ನಿಂದ ಎಲ್ಡೋರೆಟ್‌ಗೆ ರಾತ್ರಿ ಸುಮಾರು 11 ಗಂಟೆ ವೇಳೆ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಅವರು ಹಾಗೂ ಅವರ ರವಾಂಡನ್‌ ಕೋಚ್‌ ಗರ್ವೈಸ್‌ ಹಕಿಝಿಮನ ಬಲಿಯಾಗಿದ್ದಾರೆ.

ಕಾರಿನಲ್ಲಿ ಒಟ್ಟು ಮೂವರು ಪ್ರಯಾಣಿಸುತ್ತಿದ್ದರು. ಅವರಲ್ಲಿ ಇಬ್ಬರು ಮೃತಪಟ್ಟರೆ ಒಬ್ಬರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕೆಲ್ವಿನ್‌ ಅವರು ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ನಂತರ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಚಿಕಾಗೋದಲ್ಲಿ ನಡೆದ ಮ್ಯಾರಥಾನ್‌ ಅನ್ನು ಅವರು 2:00:35 ಅವಧಿಯಲ್ಲಿ ಪೂರ್ಣಗೊಳಿಸಿ ನೂತನ ವಿಶ್ವ ದಾಖಲೆ ಸೃಷ್ಟಿಸಿದ್ದರು.

ಪ್ಯಾರಿಸ್‌ನಲ್ಲಿ ಈ ವರ್ಷ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಮ್ಯಾರಥಾನ್‌ ಗೆಲ್ಲುವ ಸಾಧ್ಯತೆಯಿರುವವರಲ್ಲಿ ಅವರು ನೆಚ್ಚಿನವರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News