ನ್ಯೂಝಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ | ಭಾರತದ ಬ್ಯಾಟರ್ ಗಳ ಪೆವಿಲಿಯನ್ ಪೆರೇಡ್: 46ಕ್ಕೆ ಆಲೌಟ್
Update: 2024-10-17 07:54 GMT
ಬೆಂಗಳೂರು:ನ್ಯೂಝಿಲೆಂಡ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ನಲ್ಲಿ ಆರಂಭಿಕ ಕುಸಿತ ಅನುಭವಿಸಿದ ಭಾರತ ತಂಡವು, ನಂತರ ಚೇತರಿಕೆಯನ್ನೇ ಕಾಣದೆ ಕೇವಲ 46 ರನ್ ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಭಾರತ ತಂಡವು ಕೇವಲ 9 ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮರ ವಿಕೆಟ್ ಅನ್ನು ಕಳೆದುಕೊಂಡಿತು. ಟಿಮ್ ಸೌಥಿ ಬೌಲಿಂಗ್ ನಲ್ಲಿ ರೋಹಿತ್ ಶರ್ಮ ಬೋಲ್ಡ್ ಆದರು. ನಂತರ ಮೂರನೆ ಕ್ರಮಾಂಕದಲ್ಲಿ ಆಡಲು ಬಂದ ವಿರಾಟ್ ಕೊಹ್ಲಿ, ಒಂಬತ್ತು ಬಾಲ್ ಗಳನ್ನು ಎದುರಿಸಿದರೂ ಒಂದೂ ರನ್ ಗಳಿಸದೆ ವಿಲ್ ಒ ರೌರ್ಕೆ ಬೌಲಿಂಗ್ ನಲ್ಲಿ ಗ್ಲೆನ್ ಫಿಲಿಪ್ಸ್ ಗೆ ಕ್ಯಾಚಿತ್ತು ನಿರ್ಗಮಿಸಿದರು.
ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ತಂಡದ ಬ್ಯಾಟರ್ ಗಳ ಪೈಕಿ ಐದು ಬ್ಯಾಟರ್ ಗಳು ಸೊನ್ನೆ ಸುತ್ತಿದರು. ಭಾರತದ ಪರ ಎರಡಂಕಿ ಮೊತ್ತ ದಾಟಿದ್ದು ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (13) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (20) ಮಾತ್ರ.