ಇಂಗ್ಲೆಂಡ್‌ನ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕನಾಗಲಾರೆ: ಜೋ ರೂಟ್

Update: 2025-03-28 20:24 IST
Joe Root

ಜೋ ರೂಟ್ | PC : PTI 

  • whatsapp icon

ಹೊಸದಿಲ್ಲಿ: ಇಂಗ್ಲೆಂಡ್‌ನ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕನಾಗುವ ಸಾಧ್ಯತೆಯನ್ನು ಸಂಪೂರ್ಣ ತಳ್ಳಿ ಹಾಕಿರುವ ಇಂಗ್ಲೆಂಡ್‌ನ ಬ್ಯಾಟರ್ ಜೋ ರೂಟ್, ‘‘ನಾಯಕನಾಗಿ ನನ್ನ ಸಮಯ ಕಳೆದುಹೋಗಿದೆ’’ಎಂದು ಸ್ಪಷ್ಟಪಡಿಸಿದರು.

‘‘ನಾಯಕತ್ವದ ಬಗ್ಗೆ ಯೋಚಿಸದೆ ಭಾರತ ವಿರುದ್ಧದ ಮುಂಬರುವ ಟೆಸ್ಟ್ ಸರಣಿ ಹಾಗೂ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯ ವಿರುದ್ಧದ ಬಹು ನಿರೀಕ್ಷಿತ ಆ್ಯಶಸ್ ಸರಣಿಯತ್ತ ಪೂರ್ಣ ಗಮನ ಹರಿಸುವೆ’’ ಎಂದು ರೂಟ್ ಹೇಳಿದರು.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಎಲ್ಲ 3 ಗ್ರೂಪ್ ಹಂತದ ಪಂದ್ಯಗಳನ್ನು ಸೋತು ಕಳಪೆ ಪ್ರದರ್ಶನ ನೀಡಿದ ನಂತರ ಜೋಸ್ ಬಟ್ಲರ್ ಅವರು ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆನಂತರ ನೂತನ ಬಿಳಿಚೆಂಡಿನ ಕ್ರಿಕೆಟ್ ನಾಯಕನಿಗಾಗಿ ಇಂಗ್ಲೆಂಡ್ ತಂಡ ಹುಡುಕಾಟ ನಡೆಸುತ್ತಿದೆ.

ಇಂಗ್ಲೆಂಡ್ ತಂಡವು ಜೂನ್ 20ರಂದು ಹೆಡ್ಡಿಂಗ್ಲೆಯಲ್ಲಿ ಆರಂ‘ವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ‘ಾರತ ತಂಡದ ಸವಾಲನ್ನು ಎದುರಿಸಲಿದೆ. ಪ್ರವಾಸಿ ‘ಾರತ ತಂಡವು 2007ರಲ್ಲಿ ಕೊನೆಯ ಬಾರಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿದೆ. ಈ ಬಾರಿ ಸುದೀರ್ಘ ಸರಣಿ ಬರವನ್ನು ನೀಗಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ.

ಭಾರತ ವಿರುದ್ಧದ ಸರಣಿಯ ನಂತರ ಇಂಗ್ಲೆಂಡ್ ತಂಡವು ತನ್ನ ಗಮನವನ್ನು ಆಸ್ಟ್ರೇಲಿಯದಲ್ಲಿ ನಡೆಯಲಿರುವ ಆ್ಯಶಸ್ ಸರಣಿಯತ್ತ ಹರಿಸಲಿದೆ. 2010-11ರಿಂದ ಆಸ್ಟ್ರೇಲಿಯ ಮಣ್ಣಿನಲ್ಲಿ ಇಂಗ್ಲೆಂಡ್ ತಂಡವು ಆ್ಯಶಸ್ ಸರಣಿಯನ್ನು ಗೆದ್ದುಕೊಂಡಿಲ್ಲ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News