ಮುಂಬೈ ತಂಡಕ್ಕೆ ನಾಳೆ ಗುಜರಾತ್ ಎದುರಾಳಿ ; ಹಾರ್ದಿಕ್ ಪಾಂಡ್ಯ ವಾಪಸ್

Update: 2025-03-28 20:39 IST
Hardik Pandya

ಹಾರ್ದಿಕ್ ಪಾಂಡ್ಯ | PTI 

  • whatsapp icon

ಅಹ್ಮದಾಬಾದ್: 2024ರ ಆವೃತ್ತಿಯ ಐಪಿಎಲ್ ಟೂರ್ನಿಯ ಕೊನೆಯ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ಗಾಗಿ ಒಂದು ಪಂದ್ಯದಿಂದ ಅಮಾನತುಗೊಂಡ ನಂತರ ಹಾರ್ದಿಕ್ ಪಾಂಡ್ಯ ಶನಿವಾರ 18ನೇ ಆವೃತ್ತಿಯ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

ಮುಂಬೈ ಹಾಗೂ 2022ರ ಚಾಂಪಿಯನ್ ಗುಜರಾತ್ ತಂಡಗಳು ತಮ್ಮ ಆರಂಭಿಕ ಪಂದ್ಯಗಳಲ್ಲಿ ಕ್ರಮವಾಗಿ ಚೆನ್ನೆ‘ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿದ್ದವು. ಇದೀಗ ಮೊದಲ ಪಂದ್ಯವನ್ನು ಜಯಿಸಿ ಅಂಕದ ಖಾತೆ ತೆರೆಯುವ ವಿಶ್ವಾಸದಲ್ಲಿವೆ.

2022 ಹಾಗೂ 2023ರಲ್ಲಿ ಸತತವಾಗಿಫೈನಲ್ ನಲ್ಲಿ ಆಡಿದ್ದ ಗುಜರಾತ್ ತಂಡ ಕಳೆದ ವರ್ಷ ಪ್ಲೇ ಆ್ ಹಂತಕ್ಕೇರುವಲ್ಲಿ ವಿಲವಾಗಿತ್ತು. ಈ ವರ್ಷದ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ 243 ರನ್ ಗುರಿ ಪಡೆದಿದ್ದ ಗುಜರಾತ್ ತಂಡವು ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಅ‘ರ್ಶತಕದ ಕೊಡುಗೆಯ ಹೊರತಾಗಿಯೂ 11 ರನ್‌ಗಳಿಂದ ಸೋತಿತ್ತು.

ಮೊದಲ ಹಾಗೂ 2ನೇ ಪಂದ್ಯಗಳ ನಡುವಿನ ದೀರ್ಘ ವಿರಾಮದ ಲಾ‘ ಪಡೆದಿರುವ ಮುಂಬೈ ತಂಡವು ಜಾಮ್‌ನಗರದಲ್ಲಿರುವ ರಿಲಯನ್ಸ್ ಸೌಲ‘್ಯದಲ್ಲಿ ವ್ಯಾಯಾಮ ಹಾಗೂ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿತ್ತು.

ನಾಯಕ ಹಾಗೂ ಆಲ್‌ರೌಂಡರ್ ಹಾರ್ದಿಕ್ ಮರಳಿಕೆಯಿಂದಾಗಿ ಮುಂಬೈ ಇಂಡಿಯನ್ಸ್ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಮುಂಬೈ ತಂಡಕ್ಕೆ ಪ್ರಮುಖ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾರ ಸೇವೆ ಅಲ‘್ಯವಾಗಿದ್ದು, ಬುಮ್ರಾ ಅವರು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆ್ ಎಕ್ಸಲೆನ್ಸ್‌ನಲ್ಲಿ ತನ್ನ ಬೆನ್ನುನೋವಿನ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಮುಂಬೈ ಆಡಿದ್ದ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಹಾರ್ದಿಕ್ 2ನೇ ಪಂದ್ಯಕ್ಕೆ ವಾಪಸಾಗಿರುವ ಹಿನ್ನೆಲೆಯಲ್ಲಿ ರಾಬಿನ್ ಮಿಂಝ್ ತನ್ನ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಮುಂಬೈ ಇಂಡಿಯನ್ಸ್ ತಂಡವು ಚೆನ್ನೆ‘ನ ಚಿಪಾಕ್ ಪಿಚ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚುವಲ್ಲಿ ವಿಲವಾಗಿತ್ತು. 4 ವಿಕೆಟ್‌ಗಳ ಅಂತರದಿಂದ ಸೋಲುಂಡಿತ್ತು.

ಅಹ್ಮದಾಬಾದ್‌ನಲ್ಲಿ ಈ ವರ್ಷದ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್(243 ರನ್) ಹಾಗೂ ಆತಿಥೇಯ ಗುಜರಾತ್(232 ರನ್)ನಡುವೆ ನಡೆದಿದ್ದ ಪಂದ್ಯದಲ್ಲಿ 40 ಓವರ್‌ಗಳಲ್ಲಿ 475 ರನ್ ದಾಖಲಾಗಿತ್ತು.

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಮುಹಮ್ಮದ್ ಸಿರಾಜ್ ಅವರ ಪ್ರದರ್ಶನ ಕಳವಳಕ್ಕೆ ಕಾರಣವಾಗಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸಿರಾಜ್ 54 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡಿದ್ದರು. ಪಂಜಾಬ್ ಬ್ಯಾಟರ್‌ಗಳು ಸಿರಾಜ್ ಬೌಲಿಂಗ್ ವಿರುದ್ಧ ಪ್ರಾಬಲ್ಯ ಸಾಧಿಸಿದ್ದರು.

ಗುಜರಾತ್ ತಂಡದಲ್ಲಿ ಭಾರತ ದ ಸೀನಿಯರ್ ವೇಗಿಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಇದರಿಂದ ಗುಜರಾತ್ ತಂಡದ ಮುಖ್ಯ ಕೋಚ್ ಆಶೀಶ್ ನೆಹ್ರಾ ಅವರು ಒತ್ತಡಕ್ಕೆ ಸಿಲುಕಿದ್ದಾರೆ. ಕಾಗಿಸೊ ರಬಾಡ ಹಾಗೂ ರಶೀದ್ ಖಾನ್‌ರಿಂದ ಹೆಚ್ಚಿನ ವಿಕೆಟ್ ನಿರೀಕ್ಷಿಸುತ್ತಿದ್ದಾರೆ.

ಮುಂಬೈ ತಂಡದ ಸೂರ್ಯಕುಮಾರ್ ಯಾದವ್ ಅವರು ಕಳೆದೊಂದು ವರ್ಷದಿಂದ ಉತ್ತಮ ಪ್ರದರ್ಶನ ನೀಡುತ್ತಿಲ್ಲ, ರೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡಲು ತನ್ನ ಮೊದಲಿನ ಲಯ ಕಂಡುಕೊಳ್ಳುವ ಅಗತ್ಯವಿದೆ.

ಪಾಂಡ್ಯ ಪುನರಾಗಮದಿಂದ ಮುಂಬೈ ತಂಡದ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ವಿ‘ಾಗವೂ ಬಲಿಷ್ಠವಾಗಿದೆ.

ಈ ಋತುವಿನಲ್ಲಿ ಗುಜರಾತ್ ತಂಡದ ಸಮಗ್ರ ಪ್ರದರ್ಶನವು ನಾಯಕ ಶು‘ಮನ್ ಗಿಲ್ ಅವರ ಬ್ಯಾಟಿಂಗ್ ಾರ್ಮ್ ಅನ್ನು ಹೆಚ್ಚಾಗಿ ಅವಲಂಬಿಸಿದೆ.

ಗುಜರಾತ್ ಬೌಲಿಂಗ್ ವಿ‘ಾಗದಲ್ಲಿ ‘ಾರತದ ವೇಗಿಗಳಾದ ಸಿರಾಜ್, ಪ್ರಸಿದ್ಧ ಕೃಷ್ಣ ಹಾಗೂ ಇಶಾಂತ್ ಶರ್ಮಾ ಮೊದಲ ಪಂದ್ಯದಲ್ಲಿ ಮಿಂಚಿಲ್ಲ. ರಬಾಡ ಹೊರತುಪಡಿಸಿ ಉಳಿದ ಬೌಲರ್‌ಗಳ ದಾಳಿಯಲ್ಲಿ ಸತ್ವದ ಕೊರತೆ ಇದೆ.

ಹೆಡ್-ಟು-ಹೆಡ್ ದಾಖಲೆ

ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್ ಟೂರ್ನಿಯಲ್ಲಿ ಕೇವಲ 5 ಬಾರಿ ಮುಖಾಮುಖಿಯಾಗಿವೆ. ಈ ಪಂದ್ಯಗಳಲ್ಲಿ ಗುಜರಾತ್ 3 ಬಾರಿ ಜಯ ಸಾಧಿಸಿ ಉತ್ತಮ ದಾಖಲೆ ಹೊಂದಿದ್ದರೆ, ಮುಂಬೈ 2 ಪಂದ್ಯಗಳನ್ನು ಜಯಿಸಿತ್ತು.

ಅಹ್ಮದಾಬಾದ್ ಪಿಚ್ ರಿಪೋರ್ಟ್

ನರೇಂದ್ರ ಮೋದಿ ಕ್ರೀಡಾಂಗಣವು ತನ್ನ ಬ್ಯಾಟಿಂಗ್ ಸ್ನೇಹಿ ವಾತಾವರಣದಿಂದ ಹೆಸರುವಾಸಿಯಾಗಿದೆ. ಇತ್ತೀಚೆಗೆ ಹಲವು ಪಂದ್ಯಗಳಲ್ಲಿ ದೊಡ್ಡ ಸ್ಕೋರ್ ದಾಖಲಾಗಿತ್ತು. ಅಹ್ಮದಾಬಾದ್ ಪಿಚ್ ಮೊದಲ ಇನಿಂಗ್ಸ್‌ನಲ್ಲಿ ಸ್ಥಿರವಾಗಿ ಬೌನ್ಸ್ ಒದಗಿಸುತ್ತದೆ. ವೇಗಿಗಳು ಆರಂ‘ದಲ್ಲಿ ಸ್ವಿಂಗ್ ಪಡೆಯಬಹುದು. ಪಂದ್ಯ ಮುಂದುವರಿದಂತೆ ಪಿಚ್ ಸ್ಪಿನ್ನರ್‌ಗಳ ಸ್ನೇಹಿಯಾಗಲಿದೆ.

ತಂಡಗಳು

ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್(ನಾಯಕ), ಜೋಸ್ ಬಟ್ಲರ್(ವಿಕೆಟ್‌ಕೀಪರ್), ರ್ಶೆಾನ್ ರುದರ್‌ೆರ್ಡ್, ರಾಹುಲ್ ಟೆವಾಟಿಯಾ, ಶಾರುಕ್ ಖಾನ್, ಅರ್ಷದ್ ಖಾನ್, ಸಾಯಿ ಕಿಶೋರ್, ರಶೀದ್ ಖಾನ್, ಕಾಗಿಸೊ ರಬಾಡ, ಮುಹಮ್ಮದ್ ಸಿರಾಜ್.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕೆಲ್ಟನ್(ವಿಕೆಟ್‌ಕೀಪರ್), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ರಾಬಿನ್ ಮಿಂಝ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ವಿಘ್ನೇಶ್ ಪುಥೂರ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News