ಡೆನ್ಮಾರ್ಕ್ ಓಪನ್ | ಪಿ.ವಿ. ಸಿಂಧು ಶುಭಾರಂಭ

Update: 2024-10-16 16:15 GMT

 ಪಿ.ವಿ. ಸಿಂಧು |  PC : PTI 

ಒಡೆನ್ಸ್ : ಭಾರತ ಡಬಲ್ ಒಲಿಂಪಿಯನ್ ಪಿ.ವಿ. ಸಿಂಧು ಡೆನ್ಮಾರ್ಕ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ 70 ನಿಮಿಷಗಳ ಹಣಾಹಣಿಯಲ್ಲಿ ಚೀನಾದ ಲು ಗುವಾಂಗ್ ಝು ಎದುರು 21-12, 19-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಮತ್ತೊಂದೆಡೆ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಎದುರಾಳಿ ಚೈನೀಸ್ ತೈಪೆಯ ಪೈ ಯು ಪೊ ಎರಡನೇ ಗೇಮ್ ನಡೆಯುತ್ತಿದ್ದಾಗ ಗಾಯಗೊಂಡು ನಿವೃತ್ತಿಯಾದರು. ಮೊದಲ ಗೇಮ್ ಅನ್ನು 21-8 ಅಂತರದಿಂದ ಗೆದ್ದುಕೊಂಡಿದ್ದ ಸಿಂಧು ಎರಡನೇ ಗೇಮ್‌ನಲ್ಲಿ 13-7ರಿಂದ ಮುನ್ನಡೆಯಲ್ಲಿದ್ದರು.

ಆದರೆ ಪಂದ್ಯಾವಳಿಯಲ್ಲಿದ್ದ ಭಾರತದ ಹಲವು ಶಟ್ಲರ್‌ಗಳು ಬೇಗನೇ ನಿರ್ಗಮಿಸಿದ್ದಾರೆ.

ಮಾಳವಿಕಾ ಬಾನ್ಸೋಡ್ ಅವರು ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ವಿಯೆಟ್ನಾಂನ ಗುಯೆನ್ ಲಿನ್ ವಿರುದ್ಧ 13-21, 12-21 ಅಂತರದಿಂದ ಸೋತಿದ್ದಾರೆ.

ಆಕರ್ಷಿ ಕಶ್ಯಪ್ ಕೂಡ ಥಾಯ್ಲೆಂಡ್ ಆಟಗಾರ್ತಿ ಸಪನಿದಾ ಕಾಟೆಥೊಂಗ್ ಎದುರು 13-21, 12-21 ಅಂತರದಿಂದ ಸೋತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News