ಮುಂದಿನ ವರ್ಷ ಮೊತ್ತ ಮೊದಲ ಖೋ ಖೋ ವಿಶ್ವಕಪ್

Update: 2024-10-16 16:05 GMT

PC : 𝐊𝐇𝐎 𝐊𝐇𝐎 𝐂𝐇𝐀𝐌𝐏𝐈𝐎𝐍𝐒 \ Youtube 

ಹೊಸದಿಲ್ಲಿ : ಮೊತ್ತ ಮೊದಲ ಖೋ ಖೋ ವಿಶ್ವಕಪ್ ಹೊಸದಿಲ್ಲಿಯ ಇಂದಿರಾ ಗಾಂಧಿ ಇನ್‌ಡೋರ್ ಸ್ಟೇಡಿಯಮ್‌ನಲ್ಲಿ ಮುಂದಿನ ವರ್ಷದ ಜನವರಿ 13ರಿಂದ 19ರವರೆಗೆ ನಡೆಯಲಿದೆ ಎಂದು ಪಂದ್ಯಾವಳಿಯ ಸಂಘಟಕರು ಬುಧವಾರ ತಿಳಿಸಿದ್ದಾರೆ.

ಭಾರತದ ದೇಶಿ ಕ್ರೀಡೆಯನ್ನು ಜಾಗತಿಕ ರಂಗದಲ್ಲಿ ಪ್ರದರ್ಶಿಸುವ ಉದ್ದೇಶವನ್ನು ಈ ಕ್ರೀಡಾಕೂಟ ಹೊಂದಿದೆ.

ಪಂದ್ಯಾವಳಿಯ ಘೋಷಣೆಯ ಸಂದರ್ಭದಲ್ಲಿ, ಟೀಮ್ ಮಹಾರಾಷ್ಟ್ರ ಮತ್ತು ಶೇಷ ಭಾರತ ತಂಡಗಳ ನಡುವೆ ಪ್ರದರ್ಶನ ಪಂದ್ಯವೊಂದನ್ನು ಆಯೋಜಿಸಲಾಗಿತ್ತು. ಈ ಪಂದ್ಯವನ್ನು ಮಹಾರಾಷ್ಟ್ರ ತಂಡವು 26-24 ಅಂಕಗಳಿಂದ ಗೆದ್ದಿತು.

ವಿಶ್ವಕಪ್‌ನ ಅಧಿಕೃತ ಲಾಂಛನ ಮತ್ತು ಘೋಷವಾಕ್ಯ ‘ದ ವರ್ಲ್ಡ್ ಗೋಸ್ ಖೋ’ವನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.

ಪಂದ್ಯಾವಳಿಯಲ್ಲಿ 24 ದೇಶಗಳ ಪುರುಷ ಮತ್ತು ಮಹಿಳಾ ತಂಡಗಳು ಸೆಣಸಲಿವೆ.

‘‘ಖೋ ಖೋ ನಮ್ಮ ದೇಶದ ಮಣ್ಣಿನ ಕ್ರೀಡೆ. ಹಾಗಾಗಿ, ಈ ಕ್ರೀಡೆಯನ್ನು ಸ್ಪರ್ಧೆಗೆ ತರಲು ನಾವು ಹೆಮ್ಮೆ ಪಡುತ್ತೇವೆ. ಖೋ ಖೋ ಅಂತರ್‌ರಾಷ್ಟ್ರೀಯ ಕ್ರೀಡೆಯಾಗುವಂತೆ ಮಾಡುವಲ್ಲಿ ಕಠಿಣ ಪರಿಶ್ರಮ ಪಟ್ಟಿರುವ ಫೆಡರೇಶನ್ ಕೃತಜ್ಞತೆಗಳು’’ ಎಂದು ಭಾರತೀಯ ಖೋ ಖೋ ಫೆಡರೇಶನ್ ಅಧ್ಯಕ್ಷ ಸುಧಾಂಶು ಮಿತ್ತಲ್ ಹೇಳಿದರು.

ಯುವಜನ ವ್ಯವಹಾರಗಳು ಮತ್ತು ಕ್ರೀಡೆ ಖಾತೆಯ ಸಹಾಯಕ ಸಚಿವೆ ರಕ್ಷಾ ನಿಖಿಲ್ ಖಡಸೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News