ವಿಶ್ವಕಪ್ ಸ್ಟೇಜ್ 1: ಭಾರತೀಯ ಬಿಲ್ಗಾರಿಕೆ ತಂಡಕ್ಕೆ ಅಮೆರಿಕ ವೀಸಾ ಪಡೆಯುವುದೇ ಸಮಸ್ಯೆ

Update: 2025-04-02 22:33 IST
ವಿಶ್ವಕಪ್ ಸ್ಟೇಜ್ 1: ಭಾರತೀಯ ಬಿಲ್ಗಾರಿಕೆ ತಂಡಕ್ಕೆ ಅಮೆರಿಕ ವೀಸಾ ಪಡೆಯುವುದೇ ಸಮಸ್ಯೆ

PC : NDTV 

  • whatsapp icon

ಚೆನ್ನೈ,: ಅಮೆರಿಕದ ವೀಸಾ ಪಡೆಯುವ ಸಂದರ್ಶನಕ್ಕೆ ಸಮಯವನ್ನು ಪಡೆಯಲು ತಮಗೆ ಸಾಧ್ಯವಾಗಿಲ್ಲ ಎಂದು ಭಾರತೀಯ ಬಿಲ್ಗಾರಿಕೆ ತಂಡ ಬುಧವಾರ ಘೋಷಿಸಿದೆ. ಹಾಗಾಗಿ, ಎಪ್ರಿಲ್ 8ರಿಂದ 13ರವರೆಗೆ ಫ್ಲೋರಿಡದಲ್ಲಿ ನಡೆಯಲಿರುವ ವಿಶ್ವಕಪ್ ಸ್ಟೇಜ್ 1 ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಆಟಗಾರರಿಗೆ ಸಾಧ್ಯವಾಗದಿರಬಹುದು ಎಂಬ ಭೀತಿಯನ್ನು ಅದು ವ್ಯಕ್ತಪಡಿಸಿದೆ.

ಅನಿರೀಕ್ಷಿತ ತಾಂತ್ರಿಕ ಸಮಸ್ಯೆಗಳಿಂದಾಗಿ ವೀಸಾ ಸಂದರ್ಶನಕ್ಕೆ ಸಮಯ ಪಡೆಯುವಲ್ಲಿ 16 ಸದಸ್ಯರ ತಂಡವು ಭಾರೀ ಸವಾಲುಗಳನ್ನು ಎದುರಿಸುತ್ತಿದೆ ಎಂದು ಆರ್ಚರಿ ಅಸೋಸಿಯೇಶನ್ ಆಫ್ ಇಂಡಿಯಾ (ಎಎಐ) ತಿಳಿಸಿದೆ.

‘‘ದುರದೃಷ್ಟವಶಾತ್, ಕಳೆದ 40 ದಿನಗಳ ಅವಧಿಯಲ್ಲಿ ನಾವು ನಡೆಸಿದ ಅವಿರತ ಪ್ರಯತ್ನಗಳ ಹೊರತಾಗಿಯೂ, ಅನಿರೀಕ್ಷಿತ ತಾಂತ್ರಿಕ ಸಮಸ್ಯೆಗಳಿಂದಾಗಿ ಅಮೆರಿಕದ ವೀಸಾ ಸಂದರ್ಶನಕ್ಕೆ ಸಮಯ ಪಡೆಯುವಲ್ಲಿ ಭಾರತೀಯ ಬಿಲ್ಗಾರಿಕೆ ತಂಡವು ಭಾರೀ ಸವಾಲುಗಳನ್ನು ಎದುರಿಸುತ್ತಿದೆ’’ ಎಂದು ಎಎಐ, ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದೆ.

‘‘ಇದರ ಪರಿಣಾಮವಾಗಿ, ಮುಂಬರುವ ವಿಶ್ವಕಪ್ ಪಂದ್ಯಾವಳಿಯನ್ನು ನಾವು ಕಳೆದುಕೊಳ್ಳುವ ಹಂತದಲ್ಲಿದ್ದೇವೆ. ಅದು ನಮ್ಮ ಪಾಲ್ಗೊಳ್ಳುವಿಕೆ ಮತ್ತು ಸ್ಪರ್ಧೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಸರಕಾರದ ತಕ್ಷಣದ ಮಧ್ಯಪ್ರವೇಶ ಅಗತ್ಯವಾಗಿದೆ ಹಾಗೂ ಆ ಮೂಲಕ ನಮ್ಮ ತಂಡಕ್ಕೆ ಆಗುವ ಸಂಭಾವ್ಯ ಹಿನ್ನಡೆಯನ್ನು ತಪ್ಪಿಸಬಹುದಾಗಿದೆ’’ ಎಂದು ಅದು ಹೇಳಿದೆ.

2025ರ ವಿಶ್ವಕಪ್‌ನಲ್ಲಿ ನಾಲ್ಕು ಐದು ಹಂತಗಳು ಇರುತ್ತವೆ. ಅದು ಎಪ್ರಿಲ್ 8ರಿಂದ ಅಕ್ಟೋಬರ್ 19ರವರೆಗೆ ಫ್ಲೋರಿಡ, ಶಾಂಘೈ, ಅಂಟಾಲ್ಯ, ಮ್ಯಾಡ್ರಿಡ್ ಮತ್ತು ನನ್‌ಜಿಂಗ್‌ನಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News