ರನ್ ಚೇಸಿಂಗ್ ವೇಳೆ ತಿಲಕ್ ವರ್ಮಾ ರಿಟೈರ್ಡ್ ಔಟ್: ಏಕೆ ಈ ನಿರ್ಧಾರ ಗೊತ್ತೇ?

Update: 2025-04-05 08:45 IST
ರನ್ ಚೇಸಿಂಗ್ ವೇಳೆ ತಿಲಕ್ ವರ್ಮಾ ರಿಟೈರ್ಡ್ ಔಟ್: ಏಕೆ ಈ ನಿರ್ಧಾರ ಗೊತ್ತೇ?

PC: x.com/CricketNDTV

  • whatsapp icon

ಲಕ್ನೊ: ಶುಕ್ರವಾರ ನಡೆದ ಐಪಿಎಲ್ ಟೂರ್ನಿಯ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಕೊನೆಯ ಓವರ್ಗೆ ಮುನ್ನ ರನ್ ಬೆನ್ನಟ್ಟುತ್ತಿದ್ದ ಮುಂಬೈ ಇಂಡಿಯನ್ಸ್ ತಂಡ ತಿಲಕ್ ವರ್ಮಾ ಅವರನ್ನು ರಿಟೈರ್ಡ್ ಔಟ್ ಮಾಡಿಸಿಕೊಂಡ ಕ್ರಮ ಕುತೂಹಲಕ್ಕೆ ಕಾರಣವಾಯಿತು. 23 ಎಸೆತಗಳಲ್ಲಿ 25 ರನ್ ಗಳಿಸಿದ್ದ ವರ್ಮಾ ಅವರು ಶಾರ್ದೂಲ್ ಠಾಕೂರ್ ಅವರ 19ನೇ ಓವರ್ ನ ಕೊನೆಯ ಎಸೆತದಲ್ಲಿ ದಿಢೀರನೇ ಮೈದಾನದಿಂದ ಹೊರನಡೆದರು. ಅವರ ಸ್ಥಾನದಲ್ಲಿ ಮಿಚೆಲ್ ಸ್ಯಾಂಟರ್ ಕ್ರೀಸ್ಗೆ ಬಂದರು.

ಈ ಹಂತದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗಾಗಿ ಏಳು ಎಸೆತಗಳಲ್ಲಿ 24 ರನ್ ಗಳನ್ನು ಗಳಿಸಬೇಕಿತ್ತು. ಆದರೆ ಕೊನೆಯ ಓವರ್ ನಲ್ಲಿ 22 ರನ್ ಗಳಾಗಬೇಕಿದ್ದಾಗ ಆವೇಶ್ ಖಾನ್ ಉತ್ತಮ ಪ್ರದರ್ಶನದ ಮೂಲಕ ತಮ್ಮ ತಂಡಕ್ಕೆ 12 ರನ್ ಗಳ ಗೆಲುವು ತಂದುಕೊಟ್ಟರು.

"ದೊಡ್ಡ ಹೊಡೆತಗಳು ಅಗತ್ಯವಾಗಿದ್ದ ಸಂದರ್ಭದಲ್ಲಿ ವರ್ಮಾ ರಿಂದ ನಿರೀಕ್ಷಿತ ರನ್ ಗಳು ಬರುತ್ತಿರಲಿಲ್ಲ. ಕ್ರಿಕೆಟ್ ನಲ್ಲಿ ನೀವು ನಿಜವಾಗಿಯೂ ಪ್ರಯತ್ನ ಮಾಡಿದರೂ ಅದು ಸಂಭವಿಸದ ದಿನ ಬರಬಹುದು. ನಾವು ಏಕೆ ಹಾಗೆ ಮಾಡಿದೆವು ಎನ್ನುವುದನ್ನು ಆ ನಿರ್ಧಾರವೇ ಹೇಳುತ್ತದೆ" ಎಂದು ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ನುಡಿದರು.

2022 ಐಪಿಎಲ್ ನಲ್ಲಿ ಎಲ್ ಎಸ್ ಜಿ ವಿರುದ್ಧ ಆರ್.ಅಶ್ವಿನ್, 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಥರ್ವ ಥಾಯ್ಡೆ, ಅಹ್ಮದಾಬಾದ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸಾಯಿ ಸುದರ್ಶನ್ ಈ ಮೊದಲು ರಿಟೈರ್ಡ್ ಔಟ್ ಆಗಿದ್ದರು.

ಈ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅವರ ಹೋರಾಟದಾಯಕ ಅರ್ಧಶತಕ ವ್ಯರ್ಥವಾಗಿ, ಲಕ್ನೋ 12 ರನ್ ಗಳ ಗೆಲುವು ಸಾಧಿಸಿತು. ಇದಕ್ಕೂ ಮುನ್ನ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ (31 ಎಸೆತಗಳಲ್ಲಿ 60) ಮತ್ತು ಏಡನ್ ಮಾಕ್ರಂ (38 ಎಸೆತಗಳಲ್ಲಿ 53) ಅವರ ಉತ್ತಮ ಪ್ರದರ್ಶನದಿಂದ ಎಲ್ಎಸ್ ಜಿ 8 ವಿಕೆಟ್ ನಷ್ಟಕ್ಕೆ 203 ರನ್ ಕಲೆ ಹಾಕಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News