ರಿಂಕು ಸಿಂಗ್ ಹೋರಾಟ ವ್ಯರ್ಥ; ಕೆಕೆಆರ್ ವಿರುದ್ಧ ಲಕ್ನೋ ಗೆ ರೋಚಕ ಜಯ

PC: x.com/CricketNDTV
ಕೋಲ್ಕತ್ತ: ಇಲ್ಲಿನ ಈಡನ್ ಗಾರ್ಡನ್ ಸ್ಟೇಡಿಯಮ್ ನಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ ಟಿ20 ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಲಕ್ನೊ ಸೂಪರ್ ಜೈಂಟ್ಸ್ ತಂಡವು ರೋಚಕ ಜಯ ಗಳಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 238 ರನ್ ಗಳಿಸಿ, ಲಕ್ನೊ ತಂಡವು ಭರ್ಜರಿ ರನ್ ಕಲೆ ಹಾಕಿತು. ನಿಕೊಲಾಸ್ ಪೂರನ್ 87 ರನ್ ಗಳಿಸಿದರು.
238 ರನ್ ಗುರಿ ಪಡೆದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಪಂದ್ಯವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದ ರಿಂಕು ಸಿಂಗ್ ಜಯದ ಹೊಸ್ತಿಲಲ್ಲಿ ಎಡವಿದರು. 15 ಬಾಲ್ ಗಳಲ್ಲಿ 38 ರನ್ ಗಳಿಸಿದ ಅವರು ವೇಗದ ಆಟವಾಡಿದರು. ಅಂತಿಮವಾಗಿ 4 ರನ್ ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ಲಕ್ನೊ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಸೋಲೊಪ್ಪಿಕೊಂಡಿತು.