ಮೇ 24ರಂದು ಪಂಚಕುಲದಲ್ಲಿ ‘ನೀರಜ್ ಚೋಪ್ರಾ ಕ್ಲಾಸಿಕ್’ಜಾವೆಲಿನ್ ಸ್ಪರ್ಧೆ
Update: 2025-04-03 23:40 IST
ನೀರಜ್ ಚೋಪ್ರಾ | PTI
ಹೊಸದಿಲ್ಲಿ, ಎ.3: ಮೊದಲ ಆವೃತ್ತಿಯ ಅಂತರ್ರಾಷ್ಟ್ರೀಯ ಜಾವೆಲಿನ್ ಕ್ರೀಡಾಕೂಟ ‘ನೀರಜ್ ಚೋಪ್ರಾ ಕ್ಲಾಸಿಕ್’ ಈ ವರ್ಷದ ಮೇ 24ರಂದು ನಡೆಯಲಿದ್ದು, ಹರ್ಯಾಣದ ಪಂಚಕುಲ ಟೂರ್ನಿಯ ಆತಿಥ್ಯವನ್ನು ವಹಿಸಲಿದೆ ಎಂದು ವರ್ಲ್ಡ್ ಅತ್ಲೆಟಿಕ್ಸ್ ದೃಢಪಡಿಸಿದೆ.
ನೀರಜ್ ಚೋಪ್ರಾ ಕ್ಲಾಸಿಕ್, ವಿಶ್ವ ಅತ್ಲೆಟಿಕ್ಸ್ ಗೋಲ್ಡ್ ಕೆಟಗರಿಯ ಸ್ಪರ್ಧೆಯಾಗಿದ್ದು, ವಿಶ್ವ ಚಾಂಪಿಯನ್ಶಿಪ್ಗೆ ಪ್ರಮುಖ ಅರ್ಹತಾ ಸ್ಪರ್ಧಾವಳಿಯಾಗಿದೆ.
ಈ ಸ್ಪರ್ಧೆಯಲ್ಲಿ ಅಗ್ರಮಾನ್ಯ ಅಂತರ್ರಾಷ್ಟ್ರೀಯ ಜಾವೆಲಿನ್ ಸ್ಟಾರ್ಗಳು ಭಾಗವಹಿಸುವ ನಿರೀಕ್ಷೆ ಇದೆ.