"ನದೀಮ್ ನಮ್ಮ ಮಗ ಇದ್ದಂತೆ": ಭಾವುಕರಾದ ಚೋಪ್ರಾ ತಾಯಿ
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ನ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಬೆಳ್ಳಿಪದಕ ಗೆದ್ದ ನೀರಜ್ ಚೋಪ್ರಾ ಅವರ ಕುಟುಂಬ, ಮಗನ ಸಾಧನೆ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದೆ.
ಪ್ರಸಕ್ತ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿಪದಕ ಗೆದ್ದುಕೊಟ್ಟ ಚೋಪ್ರಾ ಅವರನ್ನು ಹಿಂದಿಕ್ಕಿ ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದರು. ಇದು ಈ ಒಲಿಂಪಿಕ್ಸ್ ನಲ್ಲಿ ಪಾಕಿಸ್ತಾನದ ಮೊದಲ ಚಿನ್ನದ ಪದಕ. ನದೀಮ್ 92.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ದಾಖಲೆ ನಿರ್ಮಿಸಿದರು.
ಎಎನ್ಐ ಜತೆ ಮಾತನಾಡಿದ ಛೋಪ್ರಾ ಅವರ ತಾಯಿ ಸರೋಜ್ ದೇವಿ, "ಮಗನ ಸಾಧನೆ ಬಗ್ಗೆ ಅತೀವ ಸಂತಸವಿದೆ. ಆತ ಮರಳಿದಾಗ ಆತನಿಗೆ ಪ್ರಿಯವಾದ ಅಡುಗೆ ಮಾಡಿ ಬಡಿಸಲು ಕಾಯುತ್ತಿದ್ದೇನೆ" ಎಂದು ಪ್ರತಿಕ್ರಿಯಿಸಿದರು.
ಅರ್ಷದ್ ನದೀಮ್ ಸಾಧನೆಯನ್ನು ಕೂಡಾ ಮುಕ್ತಕಂಠದಿಂದ ಹೊಗಳಿದ ಅವರು, ಆತ ಕೂಡಾ ನಮ್ಮ ಮಗ ಇದ್ದಂತೆ ಎಂದು ತಾಯಿ ಮಮತೆ ತೋರಿಸಿದರು.
"ನಮಗೆ ಬಹಳ ಸಂತಸವಿದೆ. ಬೆಳ್ಳಿ ಕೂಡಾ ನಮಗೆ ಚಿನ್ನಕ್ಕೆ ಸಮ. ಚಿನ್ನ ಗೆದ್ದ ನದೀಮ್ ಕೂಡಾ ನಮ್ಮ ಮಗನಂತೆ" ಎಂದು ಬಣ್ಣಿಸಿದರು.
Most beautiful video on the internet today ♥️
— Siddharth (@SidKeVichaar) August 8, 2024
“I am happy with the silver, the guy who got gold ( Arshad Nadeem) is also my child, everyone goes there after doing a lot of hard work” ~ Neeraj Chopra's mother
What grace from Neeraj Chopra's mother♥️ #JavelinThrow… pic.twitter.com/h1PfbS4LQ9