ಆಸ್ಟ್ರೇಲಿಯಾ ವಿರುದ್ಧ ಅಂಡರ್-19 ಸರಣಿ: ರಾಹುಲ್ ದ್ರಾವಿಡ್ ಪುತ್ರ ಸಮಿತ್ ಗೆ ಸ್ಥಾನ

Update: 2024-08-31 06:51 GMT

ಸಮಿತ್ ದ್ರಾವಿಡ್ (Photo:X)

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ಮತ್ತು ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಆಲ್‌ರೌಂಡರ್ ಸಮಿತ್ ದ್ರಾವಿಡ್ ಅವರು ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯ ಸರಣಿಗಾಗಿ ಮೊದಲ ಬಾರಿಗೆ ಭಾರತದ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇವರೊಂದಿಗೆ ಕರ್ನಾಟಕದ ಕಾರ್ತಿಕೇಯ ಕೆ ಪಿ, ಸಮರ್ಥ್ ಎನ್ ಅವರೂ ಸ್ಥಾನ ಪಡೆದಿದ್ದಾರೆ.

ಭಾರತ U19 ತಂಡವು ಸೆಪ್ಟೆಂಬರ್ 21, 23 ಮತ್ತು 26 ರಂದು ಪುದುಚೇರಿಯಲ್ಲಿ ಮೂರು 50 ಓವರ್‌ಗಳ ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ U19 ತಂಡವನ್ನು ಎದುರಿಸಲಿದೆ. ನಂತರ ಚೆನ್ನೈನಲ್ಲಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 7 ರಂದು ಪ್ರಾರಂಭವಾಗುವ ಎರಡು ನಾಲ್ಕು ದಿನಗಳ ಟೆಸ್ಟ್ ಪಂದ್ಯವಾಡಲಿದೆ.

ಉತ್ತರ ಪ್ರದೇಶದ ಮಧ್ಯಮ ಕ್ರಮಾಂಕದ ಆಟಗಾರ ಮುಹಮ್ಮದ್ ಅಮಾನ್ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ನೇಮಿಸಲಾಗಿದ್ದು, ಮಧ್ಯಪ್ರದೇಶದ ಸೋಹಮ್ ಪಟವರ್ಧನ್ ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಮುನ್ನಡೆಸಲಿದ್ದಾರೆ.

ಸಮಿತ್ ಇತ್ತೀಚೆಗೆ ತಮ್ಮ ಮೊದಲ ಸೀನಿಯರ್ ಪುರುಷರ T20 ಸ್ಪರ್ಧೆಯಾದ ಮಹಾರಾಜ T20 ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಸದಸ್ಯರಾಗಿ ಭಾಗವಹಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅವರು ಏಳು ಇನ್ನಿಂಗ್ಸ್‌ಗಳಲ್ಲಿ 114 ಸ್ಟ್ರೈಕ್ ರೇಟ್‌ನಲ್ಲಿ 82 ರನ್ ಗಳಿಸಿದರು.

ಶನಿವಾರ ನಡೆಯಲಿರುವ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಎದುರಿಸಲಿದೆ.

ಏಕದಿನ ಸರಣಿಗಾಗಿ ಭಾರತ U19 ತಂಡ: ರುದ್ರ ಪಟೇಲ್ (ಉಪನಾಯಕ)(GCA), ಸಾಹಿಲ್ ಪರಾಖ್ (MAHCA), ಕಾರ್ತಿಕೇಯ KP (KSCA), ಮುಹಮ್ಮದ್ ಅಮಾನ್ (C) (UPCA), ಕಿರಣ್ ಚೋರ್ಮಲೆ (MAHCA), ಅಭಿಗ್ಯಾನ್ ಕುಂದು (ವಿಕೆಟ್ ಕೀಪರ್) (MCA), ಹರ್ವಂಶ್ ಸಿಂಗ್ ಪಂಗಾಲಿಯಾ (ವಿಕೆಟ್ ಕೀಪರ್) (SCA), ಸಮಿತ್ ದ್ರಾವಿಡ್ (KSCA), ಯುಧಾಜಿತ್ ಗುಹಾ (CAB), ಸಮರ್ಥ್ ಎನ್ (KSCA), ನಿಖಿಲ್ ಕುಮಾರ್ (UTCA), ಚೇತನ್ ಶರ್ಮಾ (RCA), ಹಾರ್ದಿಕ್ ರಾಜ್ (KSCA), ರೋಹಿತ್ ರಾಜಾವತ್ (MPCA), ಮೊಹಮ್ಮದ್ ಎನಾನ್ (KCA).

ನಾಲ್ಕು ದಿನಗಳ ಟೆಸ್ಟ್ ಸರಣಿಗಾಗಿ ಭಾರತ U19 ತಂಡ: ವೈಭವ್ ಸೂರ್ಯವಂಶಿ (ಬಿಹಾರ CA), ನಿತ್ಯ ಪಾಂಡ್ಯ (BCA), ವಿಹಾನ್ ಮಲ್ಹೋತ್ರಾ (VC) (PCA), ಸೋಹಮ್ ಪಟವರ್ಧನ್ (C) (MPCA), ಕಾರ್ತಿಕೇಯ K P (KSCA), ಸಮಿತ್ ದ್ರಾವಿಡ್ (KSCA), ಅಭಿಗ್ಯಾನ್ ಕುಂದು (ವಿಕೆಟ್ ಕೀಪರ್) (MCA), ಹರ್ವಂಶ್ ಸಿಂಗ್ ಪಂಗಾಲಿಯಾ (ವಿಕೆಟ್ ಕೀಪರ್) (SCA), ಚೇತನ್ ಶರ್ಮಾ (RCA), ಸಮರ್ಥ್ N (KSCA), ಆದಿತ್ಯ ರಾವತ್ (CAU), ನಿಖಿಲ್ ಕುಮಾರ್ (UTCA), ಅನ್ಮೋಲ್ಜೀತ್ ಸಿಂಗ್ (PCA) , ಆದಿತ್ಯ ಸಿಂಗ್ (UPCA), ಮುಹಮ್ಮದ್ ಇನಾನ್ (KCA).

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News