ಟೆಸ್ಟ್ ಕ್ರಿಕೆಟ್‌ನಲ್ಲಿ 9,000 ರನ್ ಪೂರೈಸಿದ ಭಾರತದ 4ನೇ ಬ್ಯಾಟರ್ ವಿರಾಟ್ ಕೊಹ್ಲಿ
ಬೆಂಗಳೂರು,: ಈ ವರ್ಷ ಮೊದಲ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಫಾರ್ಮ್‌ಗೆ ಮರಳಿದ್ದಾರೆ. ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಭಾರತಕ್ಕೆ ಅಗತ್ಯವಿದ್ದಾಗ ಕೊಹ್ಲಿ ಮಹತ್ವದ ಇನಿಂಗ್ಸ್ ಆಡಿದರು.
ಅರ್ಧಶತಕವನ್ನು ತಲುಪಿದ ನಂತರ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 9,000 ರನ್ ಪೂರೈಸಿದ ಭಾರತದ 4ನೇ ಬ್ಯಾಟರ್ ಎನಿಸಿಕೊಂಡರು. ಈ ಮೂಲಕ ಲೆಜೆಂಡ್‌ಗಳಾದ ಸಚಿನ್ ತೆಂಡುಲ್ಕರ್(15,921 ರನ್), ರಾಹುಲ್ ದ್ರಾವಿಡ್(13,265 ರನ್) ಹಾಗೂ ಸುನೀಲ್ ಗವಾಸ್ಕರ್(10,122 ರನ್)ಅವರನ್ನೊಳಗೊಂಡ ಗಣ್ಯರ ಗುಂಪಿಗೆ ಸೇರಿದರು.
ಆದರೆ ಕೊಹ್ಲಿ ಅವರು 9,000 ರನ್ ಮೈಲಿಗಲ್ಲು ತಲುಪಲು ದೀರ್ಘ ಸಮಯ ತೆಗೆದುಕೊಂಡಿದ್ದು 197ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.
ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಕೊಹ್ಲಿ ಎರಡನೇ ಇನಿಂಗ್ಸ್‌ನಲ್ಲಿ ರನ್ ಖಾತೆ ತೆರೆಯಲು 15 ಎಸೆತಗಳನ್ನು ಎದುರಿಸಿದರು. ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ನಂತರ ಕೊಹ್ಲಿ ಸುಲಭವಾಗಿ ರನ್ ಗಳಿಸಲಾರಂಭಿಸಿದರು.
ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಇನಿಂಗ್ಸ್ ಸಹಿತ ಈ ವರ್ಷದ ನಾಲ್ಕು ಟೆಸ್ಟ್ ಪಂದ್ಯಗಳ 7 ಇನಿಂಗ್ಸ್‌ಗಳಲ್ಲಿ ಕೊಹ್ಲಿ ಅವರು ಕೇವಲ 157 ರನ್ ಗಳಿಸಿದ್ದು, ಇದರಲ್ಲಿ ಅರ್ಧಶತಕ ಇರಲಿಲ್ಲ. 47 ರನ್ ಗರಿಷ್ಠ ಸ್ಕೋರಾಗಿತ್ತು.