ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ವಿಕೆಟ್ ಸರದಾರನಾದ ಜಸ್‌ಪ್ರಿತ್ ಬುಮ್ರಾ
Update: 2024-10-18 15:10 GMT
ಬೆಂಗಳೂರು: ನ್ಯೂಝಿಲ್ಯಾಂಡ್ ವಿರುದ್ಧ ಶುಕ್ರವಾರ ನಡೆದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತದ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ 2024ರ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ವಿಕೆಟ್ ಸರದಾರನಾಗಿ ಹೊರಹೊಮ್ಮಿದರು.
ಟಾಮ್ ಬ್ಲಂಡೆಲ್ ವಿಕೆಟನ್ನು ಉರುಳಿಸಿದ ಬುಮ್ರಾ ಅವರು ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ 39ನೇ ವಿಕೆಟ್ ಪಡೆದರು. ಬುಮ್ರಾ 15 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.
ಈ ವರ್ಷ 39 ವಿಕೆಟ್‌ಗಳನ್ನು ಉರುಳಿಸಿರುವ ಬುಮ್ರಾ ಸಹ ಆಟಗಾರ ಆರ್.ಅಶ್ವಿನ್‌ರನ್ನು(38 ವಿಕೆಟ್) ಹಿಂದಿಕ್ಕಿದರು. ಇಂಗ್ಲೆಂಡ್‌ನ ಅಟ್ಕಿನ್ಸನ್, ಶುಐಬ್ ಬಶೀರ್ ಹಾಗೂ ಶ್ರೀಲಂಕಾದ ಪ್ರಭಾತ್ ಜಯಸೂರ್ಯ ಕೂಡ ತಲಾ 38 ವಿಕೆಟ್‌ಗಳನ್ನು ಪಡೆದಿದ್ದಾರೆ.
2024ರಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳು:
39-ಜಸ್‌ಪ್ರಿತ್ ಬುಮ್ರಾ(ಭಾರತ)
38-ಆರ್.ಅಶ್ವಿನ್(ಭಾರತ)
38-ಅಟ್ಕಿನ್ಸನ್(ಇಂಗ್ಲೆಂಡ್)
38-ಪ್ರಭಾತ್ ಜಯಸೂರ್ಯ(ಶ್ರೀಲಂಕಾ)
38-ಶುಐಬ್ ಬಶೀರ್(ಇಂಗ್ಲೆಂಡ್)