ಭಾರತ Vs ಆಸ್ಟ್ರೇಲಿಯ ಬಾಕ್ಸಿಂಗ್ ಡೇ ಟೆಸ್ಟ್ | ಆಸೀಸ್ 176/2
ಮೆಲ್ಬರ್ನ್ : ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯ ತಂಡವು ಭಾರತದ ವಿರುದ್ಧ 53 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದೆ.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾಗೆ ಉತ್ತಮ ಆರಂಭ ಲಭಿಸಿತು. ಪದಾರ್ಪಣೆ ಮಾಡಿದ 19 ವರ್ಷದ ಆರಂಭಿಕ ಆಟಗಾರ ಸಾಮ್ ಕೋನ್‌ಸ್ಟಾಸ್ ಭಾರತೀಯ ಬೌಲರ್‌ಗಳನ್ನು ಕಾಡಿದರು. 65 ಎಸೆತಗಳಲ್ಲಿ 60 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು. ಜಸ್ಪ್ರೀತ್ ಬೂಮ್ರಾ ಎಸೆತಕ್ಕೆ ರಿವರ್ಸ್ ಸ್ಕೂಪ್ ಮಾಡಿ ಗಮನ ಸೆಳೆದರು. 92 ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು ರವೀಂದ್ರ ಜಡೇಜಾ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು.
ಇನ್ನೊಬ್ಬ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ 121 ಎಸೆತ ಎದುರಿಸಿ 57 ರನ್ ಗಳಿಸಿದರು. ಅದರಲ್ಲಿ 6 ಬೌಂಡರಿಗಳು ಸೇರಿದ್ದವು. ಜಸ್ಪ್ರೀತ್ ಬೂಮ್ರಾ ಎಸೆತದಲ್ಲಿ ಕೆ ಎಲ್ ರಾಹುಲ್ ಗೆ ಕ್ಯಾಚಿತ್ತು ಖ್ವಾಜಾ ನಿರ್ಗಮಿಸಿದರು.
ಈಗ ಕ್ರೀಸ್ ನಲ್ಲಿ ಮಾರ್ನುಸ್ ಲಾಬುಶೇನ್, ಸ್ಟೀವ್ ಸ್ಮಿತ್ ಇದ್ದಾರೆ.
ಈ ಪಂದ್ಯದಲ್ಲಿ ಭಾರತ ಎರಡು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದೆ. ಶುಭಮನ್ ಗಿಲ್ ಬದಲಿಗೆ ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.