ವಿರಾಟ್ ಕೊಹ್ಲಿಯನ್ನು ವಿದೂಷಕ ಎಂದು ಅವಮಾನ ಮಾಡಿದ ಆಸ್ಟ್ರೇಲಿಯ ಮಾಧ್ಯಮಗಳು!
ಮೆಲ್ಬರ್ನ್ : ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಆರಂಭದಲ್ಲಿ ಕೊಹ್ಲಿ ಮತ್ತು ಕಾನ್ಸ್ಟಾಸ್ ಮಧ್ಯೆ ತುಸು ಘರ್ಷಣೆ ನಡೆದಿತ್ತು. ಮ್ಯಾಚ್ ರೆಫರಿ ತನ್ನ ತೀರ್ಪನ್ನು ಪ್ರಕಟಿಸಿದ್ದು, ವಿರಾಟ್ ಕೊಹ್ಲಿ ಅವರಿಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಿದ್ದಾರೆ. ಆಸ್ಟ್ರೇಲಿಯ ಮಾಧ್ಯಮಗಳು ವಿರಾಟ್ ಕೊಹ್ಲಿಯನ್ನು ವಿದೂಷಕ ಎಂದು ಅವಮಾನ ಮಾಡಿವೆ.
ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯ ಆರಂಭಿಕ ಆಟಗಾರ ಕಾನ್ಸ್ಟಾಸ್ ನನ್ನು ಭುಜದಿಂದ ತಳ್ಳಿದ್ದರು. ಪಂದ್ಯದ ಬಳಿಕ ಮಾತನಾಡಿದ ಕ್ಯಾನ್ಸ್ಟಾಸ್, “ನಾನು ನನ್ನ ಗ್ಲೌಸ್ ಗಳನ್ನು ಸರಿಹೊಂದಿಸುತ್ತಿದ್ದೆ. ಕೊಹ್ಲಿ ಆಕಸ್ಮಿಕವಾಗಿ ನನ್ನನ್ನು ತಳ್ಳಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದರೆ ಅದು ಕೇವಲ ಕ್ರಿಕೆಟ್, ಕೇವಲ ಉದ್ವೇಗ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದರು.
ಈ ಘಟನೆಯು ಮೈದಾನದಲ್ಲಿ ಮತ್ತು ಹೊರಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು.
ಆಸ್ಟ್ರೇಲಿಯಾದ ಮಾಧ್ಯಮಗಳು ಘಟನೆಯ ಬಗ್ಗೆ ಒಂದು ಹೆಜ್ಜೆ ಮುಂದೆ ಹೋಗಿವೆ. ‘ದಿ ವೆಸ್ಟ್ ಆಸ್ಟ್ರೇಲಿಯನ್’ ಭಾರತದ ಮಾಜಿ ನಾಯಕ ಕೊಹ್ಲಿ ಅವರನ್ನು ‘ವಿದೂಷಕ ಕೊಹ್ಲಿ’ ಎಂಬ ಶೀರ್ಷಿಕೆಯನ್ನು ಬಳಸಿಕೊಂಡು ಅವಮಾನಿಸಿದೆ. ಅವರ ಕೃತ್ಯದ ಬಗ್ಗೆ ಕೊಹ್ಲಿಯನ್ನು ಆಳುವ ಮಗು/ ಹೇಡಿ ಎಂದೂ ಕರೆದಿದೆ.