ನಿತೀಶ್-ವಾಷಿಂಗ್ಟನ್ ಹೋರಾಟ: ಫಾಲೋ-ಆನ್ ತಪ್ಪಿಸಿದ ಟೀಂ ಇಂಡಿಯಾ
ಮೆಲ್ಬೋರ್ನ್: ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಗಳ ವೈಫಲ್ಯ ಮುಂದುವರಿದಿರುವ ಹಿನ್ನೆಲೆಯಲ್ಲಿ, ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಫಾಲೋ ಆನ್ ಭೀತಿಯಿಂದ ಪಾರಾಗಲು ಮತ್ತೆ ಬಾಲಂಗೋಚಿಗಳು ಹರಸಾಹಸ ಪಡಬೇಕಾಯಿತು.
ಆಸ್ಟ್ರೇಲಿಯಾದ 474 ರನ್ ಗಳಿಗೆ ಉತ್ತರವಾಗಿ ಎರಡನೇ ದಿನದ ಕೊನೆಗೆ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದ್ದ ಭಾರತ 310 ರನ್ ಗಳ ಹಿನ್ನಡೆಯಲ್ಲಿತ್ತು. ನಿನ್ನೆಯ ಮೊತ್ತಕ್ಕೆ 27 ರನ್ ಗಳನ್ನು ಸೇರಿಸುವಷ್ಟರಲ್ಲಿ ಭಾರತದ ಭರವಸೆಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ (18) ವಿಕೆಟ್ ಒಪ್ಪಿಸಿದರು. 221 ರನ್ ಗಳಾಗುವಷ್ಟರಲ್ಲಿ ರವೀಂದ್ರ ಜಡೇಜಾ (17) ಅವರ ವಿಕೆಟನ್ನು ಕೂಡಾ ಭಾರತ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.
ಭೋಜನ ವಿರಾಮದ ವೇಳೆಗೆ ಭಾರತ 7 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದ್ದು, 40 ರನ್ ಗಳಿಸಿದ ನಿತೀಶ್ ಕುಮಾರ್ ರೆಡ್ಡಿ ಮತ್ತು 5 ರನ್ ಗಳಿಸಿದ ವಾಷಿಂಗ್ಟನ್ ಸುಂದರ್ ಕ್ರೀಸ್ ನಲ್ಲಿದ್ದಾರೆ. 230 ರನ್ ಹಿನ್ನಡೆ ಹೊಂದಿರುವ ಭಾರತಕ್ಕೆ ಫಾಲೋ ಆನ್‌ನಿಂದ ಪಾರಾಗಲು ಇನ್ನೂ 31 ರನ್ ಗಳ ಅಗತ್ಯವಿತ್ತು.