ಬಾಕ್ಸಿಂಗ್ ಡೇ ಟೆಸ್ಟ್ | ಮುಂದುವರಿದ ರೋಹಿತ್ ಶರ್ಮಾ ವೈಫಲ್ಯ ; ಭಾರತ 111/2
ಮೆಲ್ಬರ್ನ್ : ಇಲ್ಲಿನ ಎಂಸಿಜಿ ಸ್ಟೇಡಿಯಮ್ ನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಭಾರತ ತಂಡವು 31.4 ಓವರ್ ಗಳಲ್ಲಿ 111 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರ ಬ್ಯಾಟಿಂಗ್ ವೈಫಲ್ಯ ಮುಂದುವರಿದಿದ್ದು ಅವರು ಕೇವಲ ಮೂರು ರನ್ ಗಳಿಸಿ ಪ್ಯಾಟ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿ ಔಟ್ ಆದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೆ ಎಲ್ ರಾಹುಲ್ ಅವರು 24 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು.
ತಂಡವು 8 ರನ್ ಗಳಿಸಿದ್ದಾಗ ರೋಹಿತ್ ಶರ್ಮ ಪೆವಿಲಿಯನ್ ಗೆ ಮರಳಿದಾಗ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ಈಗ ಕ್ರೀಸ್ ನಲ್ಲಿರುವ ಯಶಸ್ವಿ ಜೈಸ್ವಾಲ್ 88 ಎಸೆತಗಳಲ್ಲಿ 60 ರನ್ ಗಳಿಸಿದ್ದಾರೆ. 51 ಎಸೆತ ಎದುರಿಸಿರುವ ವಿರಾಟ್ ಕೊಹ್ಲಿ 21 ರನ್ ಗಳಿಸಿ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ತಂಡವು 122.4 ಓವರುಗಳಲ್ಲಿ 474 ರನ್ ಗಳಿಸಿ ಆಲೌಟಾಯಿತು. ಭಾರತದ ಪರ ಬೂಮ್ರಾ 4 ವಿಕೆಟ್ ಪಡೆದರು. ಜಡೇಜಾ 3, ಅರ್ಶದೀಪ್ 2, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.