ಕಲಬುರಗಿ ಓಪನ್ ಪ್ರಶಸ್ತಿ ಗೆದ್ದ ರಾಮ್ಕುಮಾರ್ ರಾಮನಾಥನ್

Update: 2023-12-03 17:45 GMT

Photo: X/ @TennisTourTalk

ಕಲ್ಬುರ್ಗಿ : ಕರ್ನಾಟಕದ ಕಲ್ಬುರ್ಗಿಯಲ್ಲಿ ನಡೆದ ಕಲಬುರಗಿ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಆಸ್ಟ್ರಿಯದ ಡೇವಿಡ್ ಪಿಚ್ಲರ್ರನ್ನು ಸೋಲಿಸಿದ ಭಾರತದ ರಾಮ್ಕುಮಾರ್ ರಾಮನಾಥನ್ ಪ್ರಶಸ್ತಿ ಎತ್ತಿದ್ದಾರೆ.

ರವಿವಾರ ನಡೆದ ಫೈನಲ್ನಲ್ಲಿ ಅವರು ತನ್ನ ಎದುರಾಳಿಯನ್ನು 6-2, 6-1 ನೇರ ಸೆಟ್ಗಳಿಂದ ಸೊಲಿಸಿದರು.

ಇದು 57 ದಿನಗಳ ಅವಧಿಯಲ್ಲಿ ರಾಮ್ಕುಮಾರ್ರ ಮೂರನೇ ಐಟಿಎಫ್ ಪ್ರಶಸ್ತಿಯಾಗಿದೆ.

ಕಳೆದ ವಾರ ಐಟಿಎಫ್ ಮುಂಬೈ ಓಪನ್ ಪ್ರಶಸ್ತಿಯನ್ನು ಗೆದ್ದಿರುವ ರಾಮ್ಕುಮಾರ್, ಕಲಬುರಗಿ ಓಪನ್ನಲ್ಲಿ ತನ್ನ ಎದುರಾಳಿಯನ್ನು ಸೋಲಿಸಲು ಕೇವಲ 64 ನಿಮಿಷಗಳನ್ನು ತೆಗೆದುಕೊಂಡರು.

ಭಾರತೀಯ ಡೇವಿಸ್ ಕಪ್ ತಂಡದ ಸದಸ್ಯರಾಗಿರುವ ರಾಮ್ಕುಮಾರ್ 3,200 ಡಾಲರ್ (ಸುಮಾರು 2.66 ಲಕ್ಷ ರೂಪಾಯಿ) ಪ್ರಶಸ್ತಿ ಮೊತ್ತವನ್ನು ಸ್ವೀಕರಿಸಿದ್ದಾರೆ. ಜೊತೆಗೆ ಅಮೂಲ್ಯ 25 ಎಟಿಪಿ ಅಂಕಗಳನ್ನು ಪಡೆದಿದ್ದಾರೆ. ರನ್ನರ್ಸ್ ಅಪ್ಗೆ 2120 ಡಾಲರ್ (ಸುಮಾರು 1.76 ಲಕ್ಷ ರೂ.) ನಗದು ಬಹುಮಾನ ಮತ್ತು 16 ಎಟಿಪಿ ಅಂಕಗಳು ಲಭಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News