ಚೊಚ್ಚಲ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಪ್ರಶಸ್ತಿ ಗೆದ್ದ ಸಬಲೆಂಕ

Update: 2025-01-05 17:51 GMT

ಸಬಲೆಂಕ | PC : PTI  

ಬ್ರಿಸ್ಬೇನ್: ವಿಶ್ವದ ನಂಬರ್ ವನ್ ಟೆನಿಸ್ ಆಟಗಾರ್ತಿ ಅರೈನಾ ಸಬಲೆಂಕ ರವಿವಾರ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಪಂದ್ಯಾವಳಿಯಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಇದು ಅವರ ವೃತ್ತಿ ಜೀವನದ 18ನೇ ಪ್ರಶಸ್ತಿಯಾಗಿದೆ.

ಫೈನಲ್‌ನಲ್ಲಿ ಬೆಲಾರುಸ್ ಆಟಗಾರ್ತಿ ಸಬಲೆಂಕ ರಶ್ಯದ ಪೊಲಿನಾ ಕುದರ್‌ಮೆಟೋವರನ್ನು ಕಠಿಣ ಪರಿಶ್ರಮದಿಂದ 4-6, 6-3, 6-2 ಸೆಟ್‌ಗಳಿಂದ ಸೋಲಿಸಿದರು.

ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ, 21 ವರ್ಷದ ಝೆಕ್ ಆಟಗಾರ ಜಿರಿ ಲೆಹೆಕ ಅಮೆರಿಕದ ರೇಲಿ ಒಪೆಲ್ಕ ವಿರುದ್ಧ ಆಡಿ ಪ್ರಶಸ್ತಿ ಗೆದ್ದರು. ಮಣಿಕಟ್ಟು ಗಾಯದಿಂದ ಬಳಲುತ್ತಿದ್ದ ಒಪೆಲ್ಕ 1-4ರ ಹಿನ್ನಡೆಯಲ್ಲಿದ್ದಾಗ ಆಟದಿಂದ ನಿವೃತ್ತಿಗೊಂಡರು. ಆಗ ಲೆಹೆಕರನ್ನು ವಿಜಯಿ ಎಂಬುದಾಗಿ ಘೋಷಿಸಲಾಯಿತು. ಇದು ಅವರ ಎರಡನೇ ಎಟಿಪಿ ಪ್ರಶಸ್ತಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News