IPL 2025 | ಮ್ಯಾಕ್ಸ್ ವೆಲ್ ಮನವಿ ಪುರಸ್ಕರಿಸಿದ್ದಕ್ಕೆ ಅಂಪೈರ್ ವಿರುದ್ಧ ಸಿಟ್ಟಿಗೆದ್ದ ಶ್ರೇಯಸ್ ಅಯ್ಯರ್!

Photo credit: cricketcountry.com
ಹೈದರಾಬಾದ್: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ತಂಡ ನೀಡಿದ್ದ ಬೃಹತ್ 245 ರನ್‌ಗಳ ಬೃಹತ್ ಗುರಿಯನ್ನು ಹೈದರಾಬಾದ್ ಸನ್‌ರೈಸರ್ಸ್ ತಂಡ ಬೆನ್ನತ್ತಿದ್ದಾಗ, ಪಂಜಾಬ್ ಇಲೆವೆನ್ಸ್ ತಂಡದ ಬೌಲರ್ ಗ್ಲೆನ್ ಮ್ಯಾಕ್ಸ್ವೆಲ್ ಎಸೆದ ಓವರ್ ಬಾಲ್ ಅನ್ನು ಅಂಪೈರ್ ವೈಡ್ ಬಾಲ್ ಎಂದು ತೀರ್ಪು ನೀಡಿದರು. ಆದರೆ, ಇದರಿಂದ ತೃಪ್ತರಾಗದ ಗ್ಲೆನ್ ಮ್ಯಾಕ್ಸ್ವೆಲ್, ಡಿಆರ್‌ಎಸ್‌ಗೆ ಮನವಿ ಸಲ್ಲಿಸಿದರು. ಈ ವೇಳೆ, ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ನಾಯಕನಾದ ತಮ್ಮನ್ನು ನಿರ್ಲಕ್ಷಿಸಿ, ಗ್ಲೆನ್ ಮ್ಯಾಕ್ಸ್ವೆಲ್ ಮನವಿಯನ್ನು ಪುರಸ್ಕರಿಸಿದ ಅಂಪೈರ್ ವರ್ತನೆಯ ವಿರುದ್ಧ ಶ್ರೇಯಸ್ ಅಯ್ಯರ್ ಸಿಟ್ಟಿಗೆದ್ದ ಘಟನೆ ನಡೆಯಿತು.
ಪಂಜಾಬ್ ಕಿಂಗ್ಸ್ ಇಲೆವೆನ್ ತಂಡ ನೀಡಿದ್ದ 246 ರನ್‌ಗಳ ಗೆಲುವಿನ ಗುರಿಯನ್ನು ಹೈದರಾಬಾದ್ ಸನ್‌ರೈಸರ್ಸ್ ತಂಡ ಬೆನ್ನಟ್ಟಿದ್ದಾಗ, ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ಬೌಲರ್ ಗ್ಲೆನ್ ಮ್ಯಾಕ್ಸ್ವೆಲ್ ಎಸೆದ ಐದನೆಯ ಓವರ್ ಬಾಲ್ ಅನ್ನು ಅಂಪೈರ್ ವೈಡ್ ಬಾಲ್ ಎಂದು ತೀರ್ಪು ನೀಡಿದರು. ಆದರೆ, ಈ ತೀರ್ಪಿಗೆ ಅಸಮ್ಮತಿ ವ್ಯಕ್ತಪಡಿಸಿದ ಗ್ಲೆನ್ ಮ್ಯಾಕ್ಸ್ವೆಲ್, ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರಲ್ಲಿ ಕೇಳದೇ ತಾವೇ ಡಿಆರ್‌ಎಸ್‌ಗೆ ಮನವಿ ಮಾಡಿದರು. ಈ ಮನವಿಯನ್ನು ಮೈದಾನದಲ್ಲಿದ್ದ ಅಂಪೈರ್ ಕೂಡಾ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸಂಪರ್ಕಿಸದೆ ಪುರಸ್ಕರಿಸಿದರು. ಇದರಿಂದ ನಾಯಕ ಶ್ರೇಯಸ್ ಅಯ್ಯರ್ ಆಕ್ರೋಶಗೊಂಡರು.
"ಮೊದಲು ನನ್ನನ್ನು ಕೇಳಿ" ಎಂದು ಶ್ರೇಯಸ್ ಅಯ್ಯರ್ ಅವರು ಅಂಪೈರ್‌ನ್ನುದ್ದೇಶಿಸಿ ಹೇಳುತ್ತಿರುವುದು ಈ ವೇಳೆ ಕಂಡು ಬಂದಿತು. ಐಪಿಎಲ್‌ನ ಪ್ರಮಾಣಿತ ಶಿಷ್ಟಾಚಾರದ ಪ್ರಕಾರ, ಡಿಆರ್‌ಎಸ್ ಮನವಿಯನ್ನು ಪುರಸ್ಕರಿಸುವುದಕ್ಕೂ ಮುನ್ನ, ಡಿಅರ್‌ಎಸ್‌ಗೆ ಮನವಿ ಮಾಡಿದ ತಂಡದ ನಾಯಕನ ಒಪ್ಪಿಗೆಯನ್ನು ಮೈದಾನದಲ್ಲಿರುವ ಅಂಪೈರ್ ಪಡೆಯಬೇಕಾಗುತ್ತದೆ.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ, ನಾಯಕ ಶ್ರೇಯಸ್ ಅಯ್ಯರ್ (82), ಅರಂಭಿಕ ಆಟಗಾರರಾದ ಪಿ.ಆರ್ಯ (36) ಹಾಗೂ ಪಿ.ಸಿಂಗ್ (42) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ನಂತರ, 246 ರನ್‌ಗಳ ಬೃಹತ್ ಗೆಲುವಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಕೇವಲ 55 ಬಾಲ್‌ಗಳಲ್ಲಿ ಸಿಡಿಸಿದ ಅಮೋಘ 141 ರನ್‌ಗಳ ನೆರವಿನಿಂದ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ, ಐಪಿಎಲ್ ಕ್ರೀಡಾಕೂಟದಲ್ಲಿ ಎರಡನೆ ಅತ್ಯಧಿಕ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿದ ಶ್ರೇಯಸ್ಸಿಗೆ ಹೈದರಾಬಾದ್ ಸನ್‌ರೈಸರ್ಸ್ ತಂಡ ಭಾಜನವಾಯಿತು.
Shreyash iyer i am the captain moment
— Viraj Rk17 (@VirajRk17) April 12, 2025
In SRH vs PBKS high scoring match
Glenn Maxwell asked for review and umpire took it
Then shreyash iyer came and said i am the captain ask me i will take review #SRHvsPBKSpic.twitter.com/bADvhNrLQw