ಬಹುತೇಕ ಫಿಟ್ನೆಸ್ ಪರೀಕ್ಷೆಗಳಲ್ಲಿ ಸೂರ್ಯಕುಮಾರ್ ಉತ್ತೀರ್ಣ, ಶೀಘ್ರವೇ ಐಪಿಎಲ್‌ಗೆ ಲಭ್ಯ

Update: 2024-04-03 17:14 GMT

ಸೂರ್ಯಕುಮಾರ್ ಯಾದವ್ | Photo: PTI 

ಹೊಸದಿಲ್ಲಿ : ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ನಡೆದ ಬಹುತೇಕ ಫಿಟ್ನೆಸ್ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿರುವ ಅಗ್ರ ರ‍್ಯಾಂಕಿನ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಪಂದ್ಯ ಆಡಲು ಸಜ್ಜಾಗಿದ್ದಾರೆ.

ಸೂರ್ಯಕುಮಾರ್ ಅವರು ಸ್ಪೋರ್ಟ್ಸ್ ಹರ್ನಿಯಾ ಹಾಗೂ ಮೊಣಕಾಲು ಸಹಿತ ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಯಲ್ಲಿ ಕೊನೆಯ ಬಾರಿ ಸ್ಪರ್ಧಾತ್ಮಕ ಪಂದ್ಯ ಆಡಿದ್ದರು.

ಸೂರ್ಯ ಅವರು ಎಲ್ಲ ಪರೀಕ್ಷೆಗಳಲ್ಲಿ ಪಾಸಾಗಿದ್ದಾರೆ. ಆದರೆ ಕ್ರಿಕೆಟ್ ಆಡುವುದಕ್ಕೆ ಮರಳಲು ಕಡ್ಡಾಯವಾಗಿರುವ ಪ್ರಮಾಣಪತ್ರ ಪಡೆಯಲು ರೂಟಿನ್ ಟೆಸ್ಟ್‌ಗೆ ಒಳಗಾಗಬೇಕಾಗಿದೆ. ಗುರುವಾರದಿಂದ ಇನ್ನೊಂದು ಪರೀಕ್ಷೆ ನಡೆಸಲು ಬಾಕಿ ಇದೆ. ಆ ನಂತರ ಸ್ಪಷ್ಟ ಚಿತ್ರಣ ಹೊರ ಬರುತ್ತದೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.

ಡೆಲ್ಲಿ ವಿರುದ್ಧ ಎ.7ರಂದು ಮುಂಬೈ ಇಂಡಿಯನ್ಸ್ ಆಡಲಿರುವ ಐಪಿಎಲ್ ಪಂದ್ಯಕ್ಕೆ ಸೂರ್ಯಕುಮಾರ್ ಲಭ್ಯತೆಯ ಕುರಿತು ವಿಚಾರಿಸಿದಾಗ, ನಾಳೆಯ ಪರೀಕ್ಷೆಗಳ ನಂತರ ಸ್ಪಷ್ಟ ಚಿತ್ರಣ ಲಭಿಸಲಿದೆ. ಮುಂಬೈ ತಂಡದ ಮುಂದಿನ ಪಂದ್ಯಕ್ಕೆ ಇನ್ನೂ ಮೂರು ದಿನಗಳು ಬಾಕಿ ಇವೆ. ಅವರು ದೀರ್ಘ ಸಮಯದ ನಂತರ ಪುನರಾಗಮನವಾಗುತ್ತಿರುವ ಕಾರಣ ಎಪ್ರಿಲ್ 11ರಂದು ತವರು ಮೈದಾನದಲ್ಲಿ ಆರ್‌ಸಿಬಿ ವಿರುದ್ದ ಪಂದ್ಯಕ್ಕೆ ಲಭ್ಯವಿರಬಹುದು ಎಂದು ಮೂಲಗಳು ತಿಳಿಸಿವೆ.

ಸೂರ್ಯಕುಮಾರ್ ಕಳೆದ ನಾಲ್ಕೈದು ವರ್ಷಗಳಿಂದ ಮುಂಬೈನ ಪ್ರಮುಖ ಆಟಗಾರನಾಗಿದ್ದಾರೆ. ಈ ವರ್ಷದ ಐಪಿಎಲ್‌ನಲ್ಲಿ ಮೊದಲ 3 ಪಂದ್ಯಗಳಲ್ಲಿ ಸೋತಿರುವ ಮುಂಬೈ ತಂಡದಲ್ಲಿ ಸೂರ್ಯ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News