ಟಿ20: ಹ್ಯಾಟ್ರಿಕ್ ಟಾಸ್ ಗೆದ್ದ ಆಸೀಸ್, ಫೀಲ್ಡಿಂಗ್ ಆಯ್ಕೆ

Update: 2023-11-28 13:41 GMT

Photo: X/BCCI

ಗುವಾಹಟಿ : ಇಲ್ಲಿನ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ದದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯುಕೊಂಡಿದೆ.

5 ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲೂ ಟಾಸ್ ಗೆಲ್ಲುವ ಮೂಲಕ ಆಸ್ಟ್ರೇಲಿಯ ಹ್ಯಾಟ್ರಿಕ್ ಟಾಸ್ ಜಯಿಸಿದೆ. ಈಗಾಗಲೇ 2 ಪಂದ್ಯ ಜಯಿಸಿರುವ ಭಾರತಕ್ಕೆ ಸರಣಿ ಗೆಲ್ಲಲು ಒಂದು ಗೆಲುವು ಮಾತ್ರ ಬೇಕಾಗಿದೆ. ಭಾರತೀಯ ಯುವ ಪಡೆ ಕಳೆದ 2 ಪಂದ್ಯಗಳಲ್ಲಿ ಆಸೀಸ್ ತಂಡವನ್ನು ಸೋಲಿಸಿ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ. ಹ್ಯಾಟ್ರಿಕ್ ಗೆಲುವು ಪಡೆದರೆ ಭಾರತಕ್ಕೆ ಸರಣಿ ಜಯ ದೊರೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News